Home / Top News / ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಸ್ತನ , ನಾಲಗೆ ಕತ್ತರಿಸಿದ ದುರುಳರು

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಸ್ತನ , ನಾಲಗೆ ಕತ್ತರಿಸಿದ ದುರುಳರು

Spread the love

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುರುಳರು , ಆಕೆಯ ಗುಪ್ತಾಂಗ , ಸ್ತನ ಮತ್ತು ನಾಲಗೆಯನ್ನು ಕತ್ತರಿಸಿದ ಪೈಶಾಚಿಕ ಘಟನೆ ಬಿಹಾರದ ಸಮಷ್ಠಿಪುರ ಜಿಲ್ಲೆಯ ಕಲ್ಯಾಣಪುರ ಎಂಬಲ್ಲಿ ನಡೆದಿದೆ . ನವೆಂಬರ್ 11 ರಂದು ಮನೆಗೆ ನುಗ್ಗಿ ಬಾಲಕಿಯನ್ನು ಹೊತ್ತೊಯ್ದ ಕಾಮುಕರು , ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ , ಸ್ತನ , ಗುಪ್ತಾಂಗ , ನಾಲಗೆ ಕತ್ತರಿಸಿದ್ದಾರೆ . ಕುಟುಂಬಸ್ಥರು ಬಾಲಕಿಗಾಗಿ ಹುಡುಕಾಡಿದಾಗ ಮನೆ ಸಮೀಪದ ತೋಟದಲ್ಲಿ ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ . ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಪ್ರಸ್ತುತ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದಾಳೆ . ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು , ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ .

About Santosh Naregal

Check Also

ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Spread the love  ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ …

Leave a Reply

Your email address will not be published. Required fields are marked *

[the_ad id="389"]