ಹುಬ್ಬಳ್ಳಿ : ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಹುಬ್ಬಳ್ಳಿಯ ಮೊದಲ ಏಷ್ಯನ್ ಪೇಂಟ್ಸ್ ಮಳಿಗೆಯಾಗಿದ್ದು, ಎಲ್ಲಾ ಡೆಕೋರ್‍ಗಳ ಅಗತ್ಯಗಳಿಗಾಗಿ ಒಂದು ನಿಲುಗಡೆಯ ಮಳಿಗೆಯಾಗಿದೆ ,ಗ್ರಾಹಕ ಸೇವೆ ಮತ್ತು ಮಳಿಗೆಯಲ್ಲಿನ ಅನುಭವಗಳನ್ನು ಹೆಚ್ಚಿಸುವ ತಾಂತ್ರಿಕ ಪ್ರವೃತ್ತಿಗಳೊಂದಿಗೆ ಅನನ್ಯ ಮತ್ತು ತಲ್ಲೀನಗೊಳಿಸುವ ಶಾಪಿಂಗ್ ಅನುಭವವನ್ನು ಈ ಭಾಗದ ಗ್ರಾಹಕರಿಗೆ ನೀಡಲು ಸಿದ್ಧವಾಗಿದೆ ಎಂದು ಏಷ್ಯನ್ ಪೇಂಟ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗಲ್ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದ ಮುಖ್ಯ ರಸ್ತೆಯಲ್ಲಿರುವ ಹೊಸ ಅತ್ಯಾಧುನಿಕ ಏಷ್ಯನ್ ಪೇಂಟ್ಸ್ ಮಳಿಗೆಯನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಅತಿದೊಡ್ಡ ಬಣ್ಣ ಮತ್ತು ಡೆಕೋರ್ ಕಂಪನಿಯಾದ ಏಷ್ಯನ್ ಪೇಂಟ್ಸ್ ತನ್ನ ಮೊದಲ ಬಹು-ವಿಭಾಗೀಯ ‘ಬ್ಯೂಟಿಫುಲ್ ಹೋಮ್ಸ್ ಇಂಟೀರಿಯೊ ಸೊಲ್ಯೂಷನ್ಸ್’ ಡೆಕೋರ್ ಶೋ ರೂಮ್‍ನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಗಿದೆ, ಇದು ಸುಧಾರಿತ ಪೆÇ್ರಜೆಕ್ಷನ್ ಮ್ಯಾಪಿಂಗ್ ತಂತ್ರವನ್ನು ಒಳಗೊಂಡಿದ್ದು, ನಿರ್ದಿಷ್ಟ ಜಾಗದಲ್ಲಿ ಪೀಠೋಪಕರಣಗಳು ಮತ್ತು ಪರಿಕರಗಳು ಹೇಗೆ ಕಾಣುತ್ತವೆ ಎಂಬುದನ್ನು ತೋರಿಸುತ್ತದೆ. ಇದು ಗ್ರಾಹಕರಿಗೆ ಹೆಚ್ಚು ಕಸ್ಟಮೈಸ್ ಮಾಡಿದ ಮತ್ತು ವೈಯಕ್ತೀಕರಿಸಿದ ರೀಟೇಲ್ ಅನುಭವವನ್ನು ನೀಡುತ್ತದೆ ಎಂದರು.
ಗೃಹಾಲಂಕಾರ ಮತ್ತು ಪೀಠೋಪಕರಣಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯು ಅಭಿವೃದ್ಧಿಗೊಳ್ಳುತ್ತಿರುವ ಸ್ಥಳವಾಗಿದ್ದು, ಇಲ್ಲಿ ಗ್ರಾಹಕರು ಒಂದೇ ಸೂರಿನಡಿ ತಮ್ಮ ಮನೆಗಳಿಗೆ ಅಸಾಂಪ್ರದಾಯಿಕ ಮತ್ತು ಹೊಸ ಉತ್ಪನ್ನಗಳು, ವಿನ್ಯಾಸಗಳು, ಸರಬರಾಜುಗಳು ಮತ್ತು ಕಲ್ಪನೆಗಳನ್ನು ಹುಡುಕುತ್ತಾರೆ. ಈ ಅಗತ್ಯವನ್ನು ಗ್ರಹಿಸಿದ ಏಷ್ಯನ್ ಪೇಂಟ್ಸ್, ಹುಬ್ಬಳ್ಳಿಯಲ್ಲಿ ಬ್ಯೂಟಿಫುಲ್ ಹೋಮ್ಸ್ ಬೊಟಿಕ್ ಅನ್ನು ಪ್ರಾರಂಭಿಸುವ ಮೂಲಕ, ನಗರದ ಜನರಿಗೆ ಒಳಾಂಗಣ ಮತ್ತು ಹೊರಾಂಗಣ ಡೆಕೋರ್‍ಗಳಲ್ಲಿ ಆಳವಾದ ತಿಳುವಳಿಕೆಯನ್ನು ತರುತ್ತಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯ ಏಷ್ಯನ್ ಪೇಂಟ್ಸ್ ಮಳಿಗೆಯ ಪ್ರಾಂಚೈಸಿ ಅಶೋಕ ಮಾಲಪಾನಿ ಮತ್ತವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.