ಹುಬ್ಬಳ್ಳಿ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಬಂದಿದ್ದ ಮಹಿಳೆಯು ಕುಸಿದು ಬಿದ್ದ ಘಟನೆ ನಡೆಯಿತು.
ಇಲ್ಲಿನ ಗೋಕುಲ ರಸ್ತೆ ಗಾಂಧಿನಗರ ನಿವಾಸಿ ಭಾರತಿ ಎಂಬುವರ ಮಗನು ಅನಾರೋಗ್ಯದಿಂದ ಬಳಲುತ್ತಿದ್ದು, ಆತನನ್ನು ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬನೇ ಮಗನಿದ್ದು, ನಾವು ಆರ್ಥಿಕವಾಗಿ ಬಡವರಿದ್ದು, ಹಣಕಾಸಿನ ಸಹಾಯ ಮಾಡಿ ಎಂದು ಕೋರಿ ಸಿಎಂ ಬಳಿ ಅಳಲು ತೋಡಿಕೊಳ್ಳಲು ಮಹಿಳೆ ಬಂದಿದ್ದರು. ಸಿಎಂ ಅವರು ಕಾರು ಹತ್ತಿ ಹೋಗುತ್ತಿದ್ದಂತೆ ಮಹಿಳೆಯು ನಿತ್ರಾಣಗೊಂಡು ಕುಸಿದು ಬಿದ್ದರು. ಸ್ಥಳದಲ್ಲಿದ್ದ ಮಹಿಳಾ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತೆ ರಾಜಶ್ರೀ ಜಡಿ ಅವರು ನೀರು ಕುಡಿಸಿ ಉಪಚರಿಸಿದರು. ಅವರು ಸಾವರಿಸಿಕೊಂಡ ಮೇಲೆ ಪೊಲೀಸರು ತಮ್ಮ ಜೀಪಿನಲ್ಲಿ ಮಹಿಳೆ ಕರೆದುಕೊಂಡು ಮನೆಗೆ ತಲುಪಿಸಿದರು.