ಹುಬ್ಬಳ್ಳಿ : ನಗರದ ಉಣಕಲ್ ಕ್ರಾಸ್ ಬಳಿ ಇರುವ ರಾಯಲ್ ಓಕ್ ಪರ್ನಿಚರ್ ಶೋ ರೂಮ್ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ರಾಯಲ್ ಓಕ್ ಶೋ ರೂಂ ಭಾರತದಲ್ಲಿ ಅತಿ ದೊಡ್ಡ ಮಳಿಗೆ ಹೊಂದಿದಾಗಿದ್ದು, ಈದೀಗ ಆರಂಭವಾಗಿದೆ. ಇದರ ಸದುಪಯೋಗವನ್ನು ಹುಬ್ಬಳ್ಳಿ – ಧಾರವಾಡ ಜನತೆ ಪಡೆದುಕೊಳ್ಳಲಿದ್ದಾರೆ ಎಂದರು. ಈ ಪರ್ನಿಚರ್ ಮಳಿಗೆಯಲ್ಲಿ ಹಲವು ರೀತಿಯ ವಸ್ತುಗಳಿದ್ದು, ಎಲ್ಲಾ ವಸ್ತುಗಳು ರಿಯಾಯಿತಿ ಹಾಗೂ ಲೋನ್ ಸೌಲಭ್ಯ ಸಿಗಲಿದೆ ಎಂದ ಅವರು ಉಚಿತ ಹೋಂ ಡೆಲವರಿ ಇರಲಿದೆ ಎಂದರು.
ಈ ಸಂದರ್ಭದಲ್ಲಿ ರಾಯಲ್ ಓಕ್ ಚೇರ್ಮನ್ ವಿಜಯ ಸುಬ್ರಮಣ್ಯ, ಕಿರಣ್ ಚಾರ್ಬಿಯಾ, ಮ್ಯಾನಜಿಂಗ್ ಡ್ಯಾರಕ್ಟರ್ ಮಥನ್ ಸುಬ್ರಮಣ್ಯ, ಹೆಡ್ ಪ್ಯಾಂಚಸ್ಸಿ ರಿತೇಶ್ ಸಾಲಿನ್ ಹಾಗೂ ಶೋ ರೂಂ ಸಿಬ್ಬಂದಿಗಳು ಉಪಸ್ಥಿತರಿದ್ದರು.