ಹುಬ್ಬಳ್ಳಿ : ಚಂದ್ರಶೇಖರ ಗೂರುಜಿ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಇವತ್ತು ಹುಬ್ಬಳ್ಳಿ ಒಂದನೇ JMFC ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಕಳೆದ ಮಂಗಳವಾರ ಸರವಾಸ್ತು ತಜ್ಞ ಚಂದ್ರಶೇಖರ ( ಅಂಗಡಿ ) ಗೂರುಜಿ ಅವರನ್ನು ಹತ್ಯೆ ಮಾಡಲಾಗಿತ್ತು .
ಆರೋಪಿತರಾದ ಮಹಾಂತೇಶ ಹಾಗೂ ಮಂಜುನಾಥ ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು . ಆರು ದಿನಗಳ ಕಾಲ ಪೊಲಿಸ್ ಕಸ್ಟಡಿ ನೀಡಲಾಗಿತ್ತು . ಪೋಲಿಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿದರು.ಜುಲೈ 18 ರವರೆಗೆ ಹೆಚ್ಚಿನ ವಿಚಾರಣೆಗೆ ಪೋಲಿಸ್ ಕಸ್ಟಡಿಗೆ ನೀಡಲಾಯಿತು .
