ಹುಬ್ಬಳ್ಳಿ : ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಹಾಡು ಹಗಲೇ ಮಗು ಕಳ್ಳತನವಾದ ಘಟನೆ ನಡೆದಿದೆ. ಕೈಯಲ್ಲಿದ್ದ
40 ದಿನದ ಹಸುಗೂಸನ್ನು ಖದೀಮರು ಕದ್ದೊಯ್ದಿದ್ದಾರೆ.
ಕುಂದಗೋಳದ ನೆಹರೂ ನಗರದ ಮಹಿಳೆ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಅವರ ಮಗು. ಮಗು ಕಳೆದುಕೊಂಡ ತಾಯಿ ಗೋಳಾಡುತ್ತಿದ್ದಾರೆ.
ಕಳೆದ 10 ರಂದು ಮಗುವನ್ನ ಮಹಿಳೆ ಕಿಮ್ಸ್ ಗೆ ದಾಖಲಿಸಿದ್ದರು. ಇತ್ತೀಚೆಗೆ ಜನಿಸಿದ ಮಗುವಿನ ತೂಕ ಹೆಚ್ಚಿಸುವ ಉದ್ದೇಶದಿಂದ ಮಗುವನ್ನು ಕಿಮ್ಸ್ ಗೆ ದಾಖಲು ಮಾಡಲು ವೈದ್ಯರು ಸಲಹೆ ನೀಡಿದ್ದರು.
ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಪಾಲಕರು
ಮಗುವನ್ನು ಕಿಮ್ಸ್ ಗೆ ದಾಖಲು ಮಾಡಿದ್ದರು.
ಇಂದು ಮದ್ಯಾಹ್ನ ಏಕಾಏಕಿ ತಾಯಿಯ ಕೈಯಲ್ಲಿದ್ದ ಮಗುವನ್ನು ಕದ್ದೊಯ್ದಿರೋದಾಗಿ ಪಾಲಕರು ಆರೋಪಿಸಿದ್ದಾರೆ.
Hubli News Latest Kannada News