ಹುಬ್ಬಳ್ಳಿ : “ಕಂಡ್ಡಿಡಿ ನೋಡನ” ಚಿತ್ರ ಇದೇ ಮೇ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಜೊತೆಗೆ ಲಂಡನ್ ಮತ್ತು ಜರ್ಮನಿಯಲ್ಲಿ ಕೂಡ ಚಿತ್ರ ಬಿಡುಗಡೆಯಾಲಿದೆ ಎಂದು ಚಿತ್ರ ನಟ ಪ್ರಣವ ಸೂರ್ಯ ಹೇಳುದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಡ್ಡಿಡಿ ನೋಡನ ಚಿತ್ರದಲ್ಲಿ ಹುಬ್ಬಳ್ಳಿಯ ಕಲಾವಿದ ರಘು ವದ್ದಿ ಹಾಗೂ ಕಲ್ಲಪ್ಪ ಶಿರಕೋಳ ಅಭಿನಯಸಿದ್ದಾರೆ ಚಿತ್ರದಲ್ಲಿ ಬಹುತೇಕರು ಉತ್ತರ ಕರ್ನಾಟಕ ಭಾಗದ ಜನರು ಚಿತ್ರದಲ್ಲಿ ನಟಿಸಿದ್ದು .
ಉತ್ತರ ಕರ್ನಾಟಕ ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಹುಬ್ಬಳ್ಳಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ ಎಂದರು .
ಚಿತ್ರಕ್ಕೆ ನಿರ್ದೇಶಕ ಜೋಗಿ ಪ್ರೇಮ್ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಗೀತೆಯೊಂದಕ್ಕೆ ಹಾಡಿದ್ದಾರೆ, ಹಾಗೇ
ರಾಜೇಶ್ ಕೃಷ್ಣನ್, ಜನಪದ ಗಾಯಕಿ ಹಾಗೂ ನಿರೂಪಕಿ ದಿವ್ಯ ಆಲೂರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಿವ್ಯಾ ಚಂದ್ರಾಧರ , ಶಶಿ ಕುಮಾರ , ವಾಜ್ರಹಳ್ಳಿ , ಯೋಗೇಶ್ ಕೆ ಗೌಡಾ ,ನಾಗೇಂದ್ರ ಅರಸ, ರಘು ವದ್ದಿ ಉಪಸ್ಥಿತರಿದ್ದರು.