ಹುಬ್ಬಳ್ಳಿ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಿಲ್ಲ. 2023 ರವೆಗೂ ಬಸವರಾಜ ಬೊಮ್ಮಾಯಿವರೇ ಸಿಎಂ ಆಗಿ ಇರುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸಚಿವ ಸಂಪುಟದ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಅವರು, ಇವತ್ತಿನ ನನ್ನ ಸಿಎಂ ಭೇಟಿಯಲ್ಲಿ ವಿಶೇಷತೆ ಇಲ್ಲ. ಇಬ್ಬರು ಒಂದೇ ಪಕ್ಷದ ನಾಯಕರು ಸಾಮಾನ್ಯವಾಗಿ ಭೇಟಿ ಆಗುತ್ತಿರುತ್ತೆವೆ. ನಾನ ಏನು ಅವರನ್ನು ಏರ್ಪೋರ್ಟ್ ಕರೆಯಿಸಿಲ್ಲ, ಅವರೇ ಬಂದಿದ್ದಾರೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ಹಾಗೂ ಹೈಕಮಾಂಡ್ ನಿರ್ಧರಿಸುತ್ತದೆ. ಸಂಪುಟ ವಿಸ್ತರಣೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ನೀವೇ ನಾಯಕತ್ವ ಬದಲಾವಣೆ ಬಗ್ಗೆ ಹೇಳುತ್ತಿದ್ದರಿ. ಆದರೆ ಅದ್ಯಾವುದು ನಮ್ಮ ಪಕ್ಷದಲ್ಲಿಲ್ಲ. ದಯವಿಟ್ಟು ಯಾರು ಉಹಾಪೋಹಗಳನ್ನ ನಂಬಬೇಡಿ ಎಂದು ಅವರು ಹೇಳಿದರು.