ಹುಬ್ಬಳ್ಳಿ : ಆಟೋ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಶ್ರೇಯಾ ನಗರದಲ್ಲಿ ನಡೆದಿದೆ.
ನಾರಾಯಣ ಉಪ್ಪಾರ ಸಾವಿಗೀಡಾದ ಆಟೋ ಚಾಲಕ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಾರ್ ಚಾಲಕನನ್ನು ಕರೆದೊಯ್ದಿದ್ದಾರೆ. ಈ ಕುರಿತು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
