ಹುಬ್ಬಳ್ಳಿ : ನಗರದಲ್ಲಿ ಸಂಜೆಯ ವೇಳೆ ವರುಣನ ಅಬ್ಬರ ಜೋರಾಗಿದ್ದು, ಗಾಳಿ ಸಮೇತ ಸುರಿದ ಧಾರಾಕಾರ ಮಳೆಗೆ ಬೇವಿನಮರವೊಂದು ಧರೆಗೆ ಉರುಳಿದ ಪರಿಣಾಮ ಆಟೋ ಹಾಗೂ ಕಾರವೊಂದು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಮಾರುತಿ ನಗರದಲ್ಲಿ ನಡೆದಿದೆ.
ಏಕಾಏಕಿ ಆರಂಭಗೊಂಡ ಗಾಳಿ, ಮಳೆಯಿಂದ ಜನರು ಆತಂಕಗೊಂಡಿದ್ದು, ಗಾಳಿಯ ರಭಸಕ್ಕೆ ಬೃಹತ್ ಗಾತ್ರದ ಮರವೊಂದು ನೆಲಕ್ಕೆ ಉರುಳಿದೆ. ಮರ ನೆಲಕ್ಕೆ ಬಿದ್ದ ಹಿನ್ನೆಲೆಯಲ್ಲಿ ಕೆಳಗೆ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
Hubli News Latest Kannada News