ಹುಬ್ಬಳ್ಳಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ಜನ್ಮದಿನದಂದು ಹುಬ್ಬಳ್ಳಿಯ ಆರ್ ಜಿ ಎಸ್ ನಲ್ಲಿ ರೈಲ್ವೆ ಕನ್ನಡ ಶಾಲೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನು ತೆರವುಗೊಳಿಸಿದರೆ ಮುಂದಾಗುವ ಭಾರೀ ಅನಾಹುತ ಹಾಗೂ ಕಾನೂನು ಸುವ್ಯವಸ್ಥೆ ಭಂಗಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಣೆಯಾಗಬೇಕಾಗುತ್ತದೆ ಎಂದು ಸಮತಾ ಸೇನೆ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಎಚ್ಚರಿಕೆ ನೀಡಿದ್ದಾರೆ .
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳು ಹಾಗೂ ಅನುಯಾಯಿಗಳಿಂದ ಪ್ರತಿಷ್ಟಾಪಿಸಲ್ಪಟ್ಟಿರುವ ಆರ್ ಜಿ ಎಸ್ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನು ತೆರವು ಗೊಳಿಸುವ ಹುನ್ನಾರ ನಡೆದಿದೆ. ಇಂದು ಸಾಕಷ್ಟು ಸಂಖ್ಯೆಯಲ್ಲಿ ಆರ್ ಪಿಎಫ್ ಪಡೆಗಳು ಇಲ್ಲಿ ಜಮಾವಣೆಗೊಂಡಿವೆ. ನಮ್ಮ ಶಂಕೆಗೆ ಪುಷ್ಟಿ ನೀಡಿದೆ. ಯಾವುದೇ ಸಂದರ್ಭದಲ್ಲೂ ಇಲ್ಲಿ ಪ್ರತಿಷ್ಠಾಪನೆಗೊಂಡಿರುವ ಡಾ ಅಂಬೇಡ್ಕರ್ ಅವರ ಪ್ರತಿಮೆಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಲು ಬಿಡುವುದಿಲ್ಲ. ಹಾಗೇನಾದರೂ ಸರ್ಕಾರ ಬಲಪ್ರಯೋಗಕ್ಕೆ ಮುಂದಾದರೆ ಎಂಥದ್ದೇ ಹೋರಾಟ ಹಾಗೂ ರಕ್ತಪಾತಕ್ಕೂ ದಲಿತ ಸಂಘಟನೆ ಸಿದ್ಧರಿದ್ದಾರೆ ಎಂದರು ಗುರುನಾಥ ಉಳ್ಳಿಕಾಶಿ ಗುಡುಗಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲ , ವಿದ್ಯಾನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ,ವಿಜಯ ಕರ ಹಾಗೂ ದಲಿತ ಸಂಘಟನೆಗಳು ಮುಖಂಡರು ಉಪಸ್ಥಿತರಿದ್ದರು