ಹುಬ್ಬಳ್ಳಿ : ಆಶ್ರಯ ಮನೆಗಳಿಗಾಗಿ ಶಾಸಕನ ಮನೆ ಮುಂದೆಯೇ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಹೌದು.. ಶಾಸಕ ಅರವಿಂದ ಬೆಲ್ಲದ ಮನೆ ಮುಂದುಗಡೆ ಜಗದೀಶನಗರದ ನಿವಾಸಿಗಳು ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ನಲ್ಲಿರುವ ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮನೆಗಳನ್ನು ಹಸ್ತಾಂತರಿಸಿ, ಹಕ್ಕುಪತ್ರ ನೀಡುವಂತೆ ಪ್ರತಿಭಟನೆ ನಡೆಸುತ್ತಿರುವ ಜಗದೀಶ ನಗರ ನಿವಾಸಿಗಳು ಈ ಹಿಂದೆ ಸುಮಾರು ಸಾರಿ ಮನವಿ ಮಾಡಿದರು ಕ್ಯಾರೆ ಎನ್ನದ ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನೂ 2015 ರಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಮನೆ ಕಳೆದುಕೊಂಡ 188 ಕುಟುಂಬಗಳು ಆಶ್ರಯ ಮನೆಯ ನಿರೀಕ್ಷೆಯಲ್ಲಿದ್ದರೂ ಸುಮಾರು ವರ್ಷಗಳೇ ಕಳೆದರೂ ಇದುವರೆಗೂ ಮನೆ ಸಿಗದೇ ಇರುವುದು ಜಗದೀಶ್ ನಗರ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮನೆ ಕಳೆದುಕೊಂಡ 7 ವರ್ಷ ಕಳೆದ್ರು ಇನ್ನೂ ಮನೆಗಳನ್ನ ಹಸ್ತಾಂತರ ಮಾಡಿಲ್ಲ. ಮನೆಗಳನ್ನ ಕಟ್ಟಿಸಿ ಇನ್ನೂ ಹಸ್ತಾಂತರ ಮಾಡಿಲ್ಲ, ನಮಗೆ ಹಕ್ಕುಪತ್ರಗಳನ್ನ ನೀಡಿಲ್ಲ. 7 ವರ್ಷಗಳಿಂದ ಬಾಡಿಗೆಯ ಮನೆಯಲ್ಲಿ ಜೀವನ ಮಾಡುತ್ತಿದ್ದೆವೆ. 15 ದಿನಗಳಲ್ಲಿ ನಮಗೆ ಮನೆಗಳನ್ನ ನೀಡಬೇಕು. ಇಲ್ಲವಾದಲ್ಲಿ ಸಿಎಂ ಮನೆಮುಂದೆ ಪ್ರತಿಭಟನೆ ಮಾಡುವುದಾಗಿ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು.