Home / Top News / ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಸಂಘಪರಿವಾರದ ಹೆಸರು ತೆಗೆದುಕೊಳ್ಳದೆ ಇದ್ರೆ ತಿಂದಿದ್ದು ಅರಗುವುದಿಲ್ಲ : ಜಗದೀಶ್ ಶೆಟ್ಟರ್ ಕಿಡಿ

ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಸಂಘಪರಿವಾರದ ಹೆಸರು ತೆಗೆದುಕೊಳ್ಳದೆ ಇದ್ರೆ ತಿಂದಿದ್ದು ಅರಗುವುದಿಲ್ಲ : ಜಗದೀಶ್ ಶೆಟ್ಟರ್ ಕಿಡಿ

Spread the love

ಹುಬ್ಬಳ್ಳಿ : ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಸಂಘಪರಿವಾರದ ಹೆಸರು ತೆಗೆದುಕೊಳ್ಳದೆ ಇದ್ರೆ ತಿಂದಿದ್ದು ಅರಗುವುದಿಲ್ಲ . ರಾಜ್ಯದಲ್ಲಿ ಹಾಗೂ ಎಲ್ಲ ಸಮಸ್ಯೆಗಳಿೂ ಸಂಘಪರಿವಾರವನ್ನೇ ಗುರಿಮಾಡುತ್ತಾರೆ

ಪದೇಪದೆ ಆರ್.ಎಸ್.ಎಸ್. ಹೆಸರು ಹೇಳೋದು, ಸಂಘಪರಿವಾರದ ಹೆಸರು ಹೇಳೋದು ಖಯಾಲಿಯಾಗಿಬಿಟ್ಟಿದೆ ಎಂದು ಮಾಜಿ ಸಿಎಂ ಜಗದೀಶ್ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಇದನ್ನು ಕೂಡಲೇ ನಿಲ್ಲಿಸಬೇಕು.
ಸರ್ಕಾರದ ಬಗ್ಗೆಯಾಗಲಿ ಅಥವಾ ಮುಖ್ಯಮಂತ್ರಿಗಳ ಬಗ್ಗೆಯಾಗಲಿ ಏನಾದ್ರೂ ಮಾತಾಡೋದಿದ್ರೆ ಮಾತನಾಡಲಿ . ಅದನ್ನು ಬಿಟ್ಟು ಸಂಘಪರಿವಾರದ ವಿರುದ್ಧ ಅನಗತ್ಯ ಟೀಕೆ ಮಾಡೋದು ಸರಿಯಲ್ಲ .ವಿರೋಧ ಪಕ್ಷದ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಇವತ್ತು ಸಂಘದ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದರು.

ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿಗಳ ಅಂಗಡಿ ತೆರವು ವೇಳೆ ದಾಂಧಲೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿಸ ಅವರು,
ಇದಕ್ಕೆ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡೋಕೆ ಆಗಲ್ಲ .ಎರಡೂ ಕಡೆಯವರು ಸಂಯಮ ಬಂದದ್ದಿದ್ದರೆ ಈ ರೀತಿಯ ಘಟನೆಗಳು ನಡೆಯೋದಿಲ್ಲ
ಕಲ್ಲಂಗಡಿ ಹಣ್ಣು ಎಸೆದಾಗ ವ್ಯಾಪಾರಿಯ ಪರ ಮಾತಾಡೋರು ಶಿವಮೊಗ್ಗದ ಹರ್ಷನ ಕೊಲೆ ಬಗ್ಗೆ ಯಾಕೆ ಮಾತಾಡಲ್ಲ . ಕೇವಲ ಒಂದು ಸಮಾಜದ, ಒಂದು ಸಮುದಾಯದ ತಪ್ಪನ್ನೇ ಎತ್ತಿ ತೋರಿಸುವುದು ಸರಿಯಲ್ಲ .ಈ ಪದ್ದತಿ ಹೋಯ್ತಂದ್ರೆ ಮಾತ್ರ ಸೌಹಾರ್ದತೆ ವಾತಾವರಣ ನಿರ್ಮಾಣ ಆಗೋಕೆ ಸಾಧ್ಯ .ಈ ನಿಟ್ಟಿನಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣವನ್ನು ನಿಲ್ಲಿಸಬೇಕು ಎಂದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]