ಹುಬ್ಬಳ್ಳಿ : ವಿವಿಧ ಬೇಡಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಹುಬ್ಬಳ್ಳಿಯಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದ ಕಾರ್ಮಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು . ಕಾರ್ಮಿಕರ ವಿವಿಧ ಬೇಡಿಕೆಗಳಾದ
ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ 7500 ನೇರ ನಗದು ವರ್ಗಾವಣೆ ಮಾಡಬೇಕು ಹಾಗೂ ಪ್ರತಿ ವ್ಯಕ್ತಿಗೂ ತಲಾ ಹತ್ತು ಕೆಜಿ ಆಹಾರಧಾನ್ಯ ನೀಡಬೇಕು, ದೇಶದ ಸಂಪತ್ತಾದ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು , ಕೋವಿಡ್ ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷ ಣೆ ಮತ್ತು ವಿಮಾ ಸೌಲಭ್ಯ ಒದಗಿಸಬೇಕು ,ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಜೊತೆಗೆ ವಿದ್ಯುತ್ ಮಸೂದೆಯನ್ನು ವಾಪಸ್ ಪಡೆಯಬೇಕು ಶಾಸನಬದ್ಧ ಬೆಂಬಲ ಕಾಯ್ದೆ ರೂಪಿಸಬೇಕು ಹಾಗೂ ರಾಜ್ಯ ಸರ್ಕಾರ ಸಹ ರೈತವಿರೋಧಿ ಜನವಿರೋಧಿ ಎಪಿಎಂಸಿ ಭೂ ಸುಧಾರಣೆ ಮುಂತಾದ ತಿದ್ದುಪಡೆ ಕಾಯ್ದೆ ಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು .
ಪ್ರತಿಭಟನೆಯಲ್ಲಿ ಮಹೇಶ್ ಪತ್ತಾರ್ , ದೇವಾನಂದ್ ಜಗಾಪುರ ,ಬಾಬಾಜಾನ್ ಮುದೋಳ್ , ಗುರುಸಿದ್ದಪ್ಪ ಅಂಬಿಗೇರ , ಚಿದಾನಂದ್ ಸವದತ್ತಿ , ಬಸೀರ್ ಮುದೋಳ್ ಭಾಗಿಯಾಗಿದ್ದರು .
Hubli News Latest Kannada News