ಹುಬ್ಬಳ್ಳಿ: ರಾಜ್ಯ ಹಾಗೂ ದೇಶ ಎಂಬುವುದು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ ಕದಡಿಸಲು ಬಿಡಬೇಡಿ. ಸರ್ಕಾರ ಜನರದ್ದು, ಜನರನ್ನು ಕಾಪಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಬ್ಯಾನ ಮಾಡಿ ಈ ರೀತಿ ವಾತವರಣದಿಂದ ಏನನ್ನು ಸಾಧನೆ ಮಾಡ್ತಿರಿ. ಅಧಿಕಾರಕ್ಕಾಗಿ ರಕ್ತದಕೋಳಿ ಅಡಬೇಕಾ..? ಸಾಮರಸ್ಯ ಕೆಡಿಸಿ ಬದುಕುವುದಾದ್ರು ಎಷ್ಟು ದಿನ..? ಎಂದು ಪ್ರಶ್ನಿಸಿದರು.
*ಬಿಜೆಪಿ ವಿರುದ್ಧ ಮಾಜಿ ಸಿಎಂ ಕುಮಟರಸ್ವಾಮಿ ವಾಗ್ದಾಳಿ.*
ಮುಸ್ಲಿಂರು ತಮ್ಮ ಅಸಮಧಾನದಿಂದ ಬಂದ್ ಆಚರಣೆ ಮಾಡಿದ್ದಾರೆ. ಕೋರ್ಟ್ ತೀರ್ಪಿನ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಹೆಸರಿನಲ್ಲಿ ನಾಲ್ಕು ದಿನ ಅಧಿಕಾರ ಪಡೆಯಬಹುದು. ಇದು ಯಾರಿಗೂ ಶ್ರೇಯಸ್ಸು ತರುವುದಿಲ್ಲ. ಜನರ ರಕ್ತದ ಮೇಲೆ ನೀವು ಅಧಿಕಾರ ಮಾಡಬೇಕಾ. ದಿನನಿತ್ಯದ ಬಳಿಕೆ ವಸ್ತುಗಳು ಗಗನೇಕ್ಕುರುತ್ತಿವೆ ಆ ಬಗ್ಗೆ ಗಮನ ಕೋಡಿ ಎಂದು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
*ರಾಜ್ಯದ ನೀರಾವರಿ ಯೋಜನೆ ಪೂರ್ಣ ಮಾಡಲು ಎರಡು ರಾಷ್ಟ್ರೀಯ ಪಕ್ಷದ ವಿಫಲ.*
ಹಿರೇಕೆರೂರಿನಲ್ಲಿ ನಮ್ಮ ಪಕ್ಷದ ಕಾರ್ಯಕ್ರಮವಿದೆ. ಪಕ್ಷ ಸಂಘಟನೆ ದೃಷ್ಠಿಯಿಂದ ಪ್ರವಾಸ ಕೈಗೊಂಡಿದ್ದೇನೆ. ಮುಂದಿನ 5 ನೇ ತಾರೀಖಿನಿಂದ ಉತ್ತರ ಕರ್ನಾಟಕ ಭಾಗದ ಪಕ್ಷ ಸಂಘಟನೆಗೆ ಸಮಯ ನೀಡುತ್ತೇನೆ. ಎರಡೂ ರಾಷ್ಟ್ರೀಯ ಪಕ್ಷಗಳು ನೀರಾವರಿ ಯೋಜನೆ ಪೂರ್ಣಗೊಳಿಸಲು ಯಶಸ್ಸು ಕಂಡಿಲ್ಲ. ಅವರಿಗೆ ಯಾವುದೇ ಬದ್ಧತೆ ಇಲ್ಲ. ಅಕ್ಕ ಪಕ್ಕದ ರಾಜ್ಯಗಳು ನೀರನ್ನು ಉಪಯೋಗ ಮಾಡಿಕೊಳ್ಳುತ್ತಿವೆ. ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜೆಡಿಎಸ್ ಪಕ್ಷದ ಸಂಕಲ್ಪ ಇದೆ. ಅಧಿವೇಶನ ನಂತರ ಈ ಕಾರ್ಯಕ್ರಮ ಆರಂಭ ಮಾಡುತ್ತೇವೆ. ನಮಗೆ ಎರಡು ಪಕ್ಷಗಳಿಂದ ಅನ್ಯಾಯವಾಗ್ತಿದೆ ಎಂದು ಅವರು ಹೇಳಿದರು.
*ಮಹದಾಯಿ ರೈತ ಹೋರಾಟಗಾರರನ್ನು ಕಾಂಗ್ರೆಸ್ ಪಕ್ಷವೇ ಹೊಡಿಸಿತ್ತು.*
ಕಾಂಗ್ರೆಸ್ ನವರ ಮಹದಾಯಿಗಾಗಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಇಲ್ಲಿನ ಮಹಿಳೆಯರು ಹೋರಾಟಗಾರರ ಮೇಲೆ ಹಲ್ಲೆ ನಡೆಸಲಾಯಿತು. ರೈತರನ್ನು ಹೊಡೆದು ಅಟ್ಟಿದ್ದು ಕಾಂಗ್ರೆಸ್ ಸರ್ಕಾರ. ಯಾವ ನೈತಿಕತೆ ಇಟ್ಕೊಂಡು ಪಾದಯಾತ್ರೆ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.