ಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ಪುನೀತ್ ಅಭಿಮಾನಿಗಳಿಂದ ವಿರೋಧ
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ದಿ. ಪುನೀತ್ ರಾಜಕುಮಾರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರು.
ನಗರದ ಅಪ್ಸರಾ ಮತ್ತು ಸುಧಾ ಥೇಟರ್ ಸೇರಿದಂತೆ ವಿವಿಧ ಮಾಲ್ ಗಳಲ್ಲಿನ ಮಲ್ಟಿಪ್ಲೆಕ್ಸ್ ನಲ್ಲಿ ಜೇಮ್ಸ್ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಹೀಗಿದ್ದೂ RRR ಚಿತ್ರಕ್ಕಾಗಿ ಸುಧಾ ಟಾಕೀಸ್ ನಲ್ಲಿ ಜೇಮ್ಸ್ ಚಿತ್ರವನ್ನು ಎತ್ತಗಂಡಿ ಮಾಡಲಾಗುತ್ತಿದೆ. ಈ ವಿಷಯ ಕೇಳಿದ ಅಪ್ಪು ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಚಿತ್ರವನ್ನು ತಗೆಯಲು ಬಿಡುವುದಿಲ್ಲ. ಒಂದು ವೇಳೆ ಚಿತ್ರವನ್ನು ಚಿತ್ರಮಂದಿರದಿಂದ ತಗೆದು ಅನ್ಯ ಭಾಷೆಯ ಚಿತ್ರ ಹಾಕಿದ್ರೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಿವದಿಲ್ಲ ಎಂದು ಎಚ್ಚರಿಕೆ ನೀಡಿದರು.