ಹುಬ್ಬಳ್ಳಿ : ಪತ್ನಿ ಮೇಲೆ ಪತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಖಂಡನೀಯವಾಗಿದೆ. ಅಪೂರ್ವ ಜೀವನ್ಮರಣ ಹೋರಾಟದಲ್ಲಿದ್ದು ಆಕೆಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ವಸಂತ ನಾಡಜೋಶಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಹೆಣ್ಣುಮಕ್ಕಳು ಲವ್ ಜಿಹಾದ್ ಗೆ ಒಳಪಡುತ್ತಿದ್ದು,ನಾನಾ ಆಮಿಷ ಒಡ್ಡಿ, ಕುಟುಂಬದ ಸದಸ್ಯರಿಗೂ ತಿಳಿಯದಂತೆ ಮದುವೆಯಾಗಿ ತಮ್ಮ ಧರ್ಮದ ಆಚರಣೆ ಮತ್ತು ಆಹಾರ ಪದ್ಧತಿಗಳನ್ನೆ ಕಡ್ಡಾಯವಾಗಿ ಅನುಸರಿಸುವುದು. ಅಲ್ಲದೇ ಇದರಿಂದಾಗಿ ಮಾನಸಿಕ ಹಾಗೂ ದೈಹಿಕ ಹಿಂಸಾಚಾರ, ದಬ್ಬಾಳಿಕೆಯಿಂದಾಗಿ ಹೆಣ್ಣುಮಕ್ಕಳು ನಲಗುವಂತಾಗಿದೆ.
ಅಪೂರ್ವ ಹೆಸರನ್ನು ಅರ್ಫಾನುಬಾನು ಎಂದು ಹೆಸರು ಬದಲಾಯಿಸಿದ್ದಲ್ಲದೆ. ಹಲ್ಲೆ ಮಾಡಿದ್ದ ಪತಿ ಇಜಾಜ್ ಶಿರೂರ ಈಗಾಗಲೇ ಮದುವೆಯಾಗಿದ್ದರೂ ಕೂಡಾ ೨ ನೇ ಮದುವೆಯಾಗಿದ್ದಾನೆ. ಇದನ್ನು ತಿಳಿದ ಅಪೂರ್ವ ವಿಚ್ಚೇದನಕ್ಕೆ ಮುಂದಾಗಿದ್ದನ್ನು ಸಹಿಸಲಾಗದೇ ಇಜಾಜ್ ಮಾರಣಾಂತಿಕವಾಗಿ ಮನಬಂದಂತೆ ಹಲ್ಲೆ ನಡೆಸಿದ್ದು, ಆತನಿಗೆ ಕಾನೂನಿಡಿಯಲ್ಲಿ ಯಾವುದೇ ಜಾಮೀನು ಸಿಗದಂತೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇಂತಹ ಕ್ರೂರಿ ಹಾಗೂ ಸಮಾಜಘಾತಕರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು.
ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಹಿಂದೂ ಧರ್ಮ ಹಾಗೂ ಬ್ರಾಹ್ಮಣ ಸಮಾಜದ ಜನತೆ ಬೃಹತ್ ಪ್ರತಿಭಟನೆ ಮಾಡುವಂತೆ ಯೋಜಿಸಿದ್ದು, ಸರಕಾರ ಈ ಕೂಡಲೇ ಕಠಿಣ ಕ್ರಮ ಜರುಗಿಸಿ ಅಪೂರ್ವಾಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎ.ಸಿ.ಗೋಪಾಲ, ಜಯತೀರ್ಥ ಕಟ್ಟಿ, ಸುನೀಲ ಗುಮಾಸ್ತೆ, ಮುರಳಿ ಕರ್ಜಗಿ, ವಿಜಯ ನಾಡಜೋಶಿ, ದತ್ತಮೂರ್ತಿ ದತ್ತಮೂರ್ತಿ ಕುಲಕರ್ಣಿ, ಡಾ. ಬಿ.ಬಿ.ಪಾಟೀಲ್, ಡಿ.ಪಿ.ಪಾಟೀಲ್, ಮನೋಹರ ಪರ್ವತಿ ಉಪಸ್ಥಿತರಿದ್ದರು