ಹುಬ್ಬಳ್ಳಿ : ವಾಣಿಜ್ಯ ನಗರಿಯಲ್ಲಿ ಮತ್ತೆ ಕೊಲೆ, ರೌಡಿಶೀಟರ್ ಹತ್ಯೆ. ಚೋಟಾ ಮುಂಬೈನಲ್ಲಿ ಮತ್ತೆ ತಲವಾರು ಝಳಪಿಸಿದೆ. ಕಾರವಾರ ರಸ್ತೆಯ ಅರವಿಂದ ನಗರದ ಪಿಎನ್ ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ತಲವಾರಿನಲ್ಲಿ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ತೊರವಿಹಕ್ಕಲದ ನಿವಾಸಿ ಅಕ್ಬರ್ ಅಲ್ಲಾಭಕ್ಷ್ಯ ಮುಲ್ಲಾ ಎಂದು ಗುರುತಿಸಲಾಗಿದೆ.
ಈತ ಗುರುವಾರ ರಾತ್ರಿ ಕುಡಿದು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಇಂದಿರಾನಗರದ ನವೀನ್, ಹಾಗೂ ಸದಾನಂದ ಸೇರಿದಂತೆ ಮತ್ತಿಬ್ಬರು ರಾತ್ರಿ 1 ಗಂಟೆಗೆ ಕರೆಸಿ ಕುತ್ತಿಗೆ ಹಾಗೂ ಮುಖ ಸೇರಿದಂತೆ ಮುಂತಾದ ಸ್ಥಳಗಳಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ತಪ್ಪಿತಸ್ಥ ಆರೋಪಿಗಳನ್ನ ಭಂಡಿಸಿ ಕಠಿಣ ಕಾನೂನು ಶಿಕ್ಷೆಯನ್ನ ನೀಡಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಕುರಿತು ಹಳೇಹುಬ್ಬಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಕೊಲೆ ಮಾಡಿದ ಆರೋಪಿಯೊರ್ವ ತಾನೇ ಕೊಲೆ ಮಾಡಿರುವುದಾಗಿ ಠಾಣೆಗೆ ಬಂದು ಶರಣಾಗಿದ್ದಾನೆ. ಇನ್ನು ಘಟನೆಗೆ ಹಣಕಾಸಿನ ವಿಷಯಕ್ಕೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಈ ಕುರಿತು ನಿಖರ ಮಾಹಿತಿ ಪೋಲಿಸ್ ತನಿಖೆಯಿಂದ ತಿಳಿದುಬರಬೇಕಿದೆ.
Hubli News Latest Kannada News