ಹುಬ್ಬಳ್ಳಿ : ಪೌರ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ವತಿಯಿಂದ ಪ್ರತಿಭಟನೆ ನಡೆಸಲಾಯಿತು .
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರದ ಆದೇಶದಂತೆ ೧೪ ಅಂಶಗಳನ್ನು ಕಾರ್ಮಿಕ ಪ್ರವಧಾನಗಳನ್ನು ಒದಗಿಸುವಂತೆ ಹಾಗೂ ಮಹಾನಗರ ಪಾಲಿಕೆ ೮ ತಿಂಗಳಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ಪೂರೈಕೆ ಸ್ಥಗಿತಗೊಳಿಸಿದೆ ಕೂಡಲೇ ಉತ್ತಮ ಗುಣಮಟ್ಟದ ಬೆಳಗಿನ ಉಪಾಹಾರ ವನ್ನು ಪೌರಕಾರ್ಮಿಕರಿಗೆ ಪೂರೈಸುವಂತೆ ಹಾಗೂ
ಪಾಲಿಕೆ ಆವರಣದಲ್ಲಿ ಪೌರ ಕಾರ್ಮಿಕರ ಸಂಘದ ಕಚೇರಿ ಕಟ್ಟಡ ಒದಗಿಸಬೇಕೆಂದು ಆಗ್ರಹಿಸಿದರು . ಹಾಗೂ ೬೦ ವರ್ಷ ಮೇಲ್ಪಟ್ಟ ಪೌರಕಾರ್ಮಿಕರಿಗೆ ೧೦ಬಲಕ್ಷ ಪರಿಹಾರವ ತಿಂಗಳಿಗೆ ೧೫೦೦ ಪಿಂಚಣಿ ನೀಡಬೇಕೆಂದು ಆಗ್ರಹಿಸಿದರು .
ಪ್ರತಿಭಟನೆಯಲ್ಲಿ ಗಂಗಮ್ಮ ಸಿದ್ರಾಮಪುರ ,ಗಾಳೆಪ್ಪ ದ್ವಾಸಲಕೇರಿ ,ವಿಜಯಕುಮಾರ್ ಗಬ್ಬೂರ್ , ಮಂಜುನಾಥ್ ನಾಗನೂರ, ರೇಣುಕಾ ಬಳ್ಳಾರಿ ಇತರರು ಭಾಗಿಯಾಗಿದ್ದರು.