ಹುಬ್ಬಳ್ಳಿ : ಬಾಳೆಹೊನ್ನೂರು ಶ್ರೀ ಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಅವರ ಸಾನಿಧ್ಯದಲ್ಲಿ ಲಿ. ಶ್ರೀ ವೇ.ಮೂ. ಕಾಡಯ್ಯ ಗು. ಹಿರೇಮಠ ಇವರ ೮೧ ನೇಯ ಜನ್ಮ ಸಂಸ್ಮರಣ ದಿನಾಚರಣೆ ಪ್ರಯುಕ್ತ ಧರ್ಮ ಸಮಾರಂಭದಲ್ಲಿ ‘ಕಂಚಿನ ಪುತ್ಥಳಿ ಅನಾವರಣ ಹಾಗೂ ಮಾನವೀಯ ಮೂರ್ತಿ ಸಂಸ್ಮರಣ ಗ್ರಂಥ ಬಿಡುಗಡೆ’ ಕಾರ್ಯಕ್ರಮವನ್ನು ಇದೇ ದಿ. ೬ ರಂದು ರವಿವಾರ ಬೆಳಿಗ್ಗೆ ೧೧ ಗಂಟೆಗೆ ನಗರದ ಕುಸುಗಲ್ ರಸ್ತೆಯ ಕೆ.ಜಿ. ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿ.ವಿ. ಕಲಾ ಬಳಗದ ಗದಿಗೆಯ್ಯಾ ಹಿರೇಮಠ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,, ಅಂದಿನ ಕಂಚಿನ ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ. ಸಭೆಯ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ‘ಮಾನವೀಯ ಮೂರ್ತಿ’ ಸಂಸ್ಮರಣ ಗ್ರಂಥ ಬಿಡುಗಡೆಯನ್ನು ಮಾಜಿ ಮುಖ್ಯಮಂತ್ರಿ, ಶಾಸಕರಾದ ಜಗದೀಶ್ ಶೆಟ್ಟರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಹೊರಟ್ಟಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವರಾದ ಸಿ.ಸಿ.ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ, ಹುಬ್ಬಳ್ಳಿ ತಾಲೂಕಾ ಘಟಕದ ಶ್ರೀ ಮದ್ವೀರಶೈವ ಸದ್ಬಧನ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಅವರಿಂದ ಸ್ವಾಗತ, ಹುಬ್ಬಳ್ಳಿ ಜಂಗಮಾಭಿವೃದ್ಧಿ ಸಂಸ್ಥೆಯ ಗೌರವಾಧ್ಯಕ್ಷ ಆರ್.ಎಂ.ಹಿರೇಮಠ ಅವರಿಂದ ವಂದನಾರ್ಪಣೆ, ಮಹಿಳಾ ಅಭಿವೃದ್ಧಿ ಮಂಡಳದ ಪಾರ್ವತಿ ಅವರಿಂದ ಪ್ರಾರ್ಥನೆ, ಗದಿಗೆಯ್ಯಾ ಹಿರೇಮಠ ಹಾಗೂ ದ್ರಾಕ್ಷಾಯಿಣಿ ಹಿರೇಮಠ ಅವರಿಂದ ನಿರೂಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಆಯೋಜನೆಯನ್ನು ಶ್ರೀ ಕಾಡಯ್ಯನವರು ಹಿರೇಮಠ ಇವರ ಜನ್ಮ ಸಂಸ್ಮರಣ ಸಮಿತಿ, ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ ಹುಬ್ಬಳ್ಳಿ ತಾಲೂಕು ಘಟಕ, ಹುಬ್ಬಳ್ಳಿ ಜಂಗಮಾಭಿವೃದ್ಧಿ ಹುಬ್ಬಳ್ಳಿ, ಹುಬ್ಬಳ್ಳಿ ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘ, ಹುಬ್ಬಳ್ಳಿಯ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳ, ಕೇಶ್ವಾಪೂರದ ಶ್ರೀ ಬಸವಣ್ಣದೇವರ, ಹನುಮಂತದೇವರ, ಗ್ರಾಮದೇವಿ ಸೇವಾ ಸಮಿತಿ, ವಿದ್ಯಾನಗರದ ಜೀವಿ ಕಲಾಬಳಗದ ಸಂಯುಕ್ತಾಶ್ರಯದಲ್ಲಿ ಜರುಗಲಿದೆ ಎಂದರು.
ಅಂದಿನ ಕಾರ್ಯಕ್ರಮದಲ್ಲಿ ಸುಳ್ಳ ಗ್ರಾಮದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸೂಡಿ ಗ್ರಾಮದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ. ಸ್ವಾಮಿಗಳು, ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಮ್ಮಿನಭಾವಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಹಾವೇರಿಯ ಶ್ರೀ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಹಿರೇಮಠ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿ ಜಂಗಮಾಭಿವೃದ್ಧಿಯ ಸಂಸ್ಥೆಯ ಗೌರವಾಧ್ಯಕ್ಷ ಆರ್. ಎಂ. ಹಿರೇಮಠ, ಬಸಯ್ಯ ಹಿರೇಮಠ, ಮಂಜುನಾಥ ಉಡುಪಿ, ಚೆನ್ನಯ್ಯ ಚುಳಕಿಮಠ ಸೇರಿದಂತೆ ಉಪಸ್ಥಿತರಿದ್ದರು.