ಹುಬ್ಬಳ್ಳಿ : ವೈದ್ಯರ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು, ಮನೆಯ ಹಿಂಬದಿಯ ಬೀಗ ಮುರಿದು ಮನೆಯಲ್ಲಿದ್ದ ಲಕ್ಷಾಂತರ ರೂ.ಹಾಗೂ ಬಂಗಾರ ದೋಚಿಕೊಂಡು ಹೋಗಿರುವ ಘಟನೆ, ಹುಬ್ಬಳ್ಳಿ ಗದಗ ರಸ್ತೆಯ ಚೇತನಾ ಕಾಲೋನಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಡಾ. ಬಸವರಾಜ ದೊಡ್ಡಮನಿ ಎಂಬವವರ ಮನೆಯೇ ಕಳ್ಳತನವಾಗಿದ್ದು, ಇವರು ಕ್ಲಿನಿಕ್ಗೆಂದು ಹೋಗಿದ್ದಾಗ ಕಳ್ಳರು ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ಸುಮಾರು 250 ಗ್ರಾಂ ಚಿನ್ನ, 5 ಲಕ್ಷ ರೂ. ಹಣ ಮತ್ತು ಕೆಲ ಬೆಳ್ಳೆ ಸಾಮಾನುಗಳನ್ನು ಕಳ್ಳರು ನಿನ್ನೆ ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.