ಹುಬ್ಬಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟಗೊಂಡಹುಣಸಿಯಲ್ಲಿ 73ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷ ಶಂಕರಗೌಡ ಹೊನ್ನಪ್ಪಗೌಡ್ರ ಧ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆ ಮತ್ತು ಹಿರಿಮೆ ಅಪಾರ. ಒಕ್ಕೂಟ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ಹಾಗೂ ಅದರ ಅಂಶಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಇಲ್ಲಿನ ನೆಲ,ಜಲ ಹಾಗೂ ಸಂಸ್ಕ್ರತಿಯ ರಕ್ಷಣೆಯ ಜೊತೆಗೆ ಸಂವಿಧಾನದ ಮೇಲೆ ನಂಬಿಕೆಯೊಂದಿಗೆ ಪರಸ್ಪರ ಸಾಮರಸ್ಯ ಹಾಗೂ ಸೌಹಾರ್ಧತೆ ಬದುಕುವ ಮೂಲಕ ದೇಶದ ಗೌರವ ಎತ್ತಿಹಿಡಿಯಬೇಕು ಎಂದ ಅವರು, ಇತ್ತಿಚೆಗೆ ಕೊರೋನಾ ಹಾವಳಿಯಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ. ಹಾಗಾಗಿ ಕೊರೋನಾ ಮಹಾಮಾರಿ ಆದಷ್ಟು ಬೇಗಾ ನಾಶವಾಗಿ ಮಕ್ಕಳು ಮತ್ತೆ ಮೊದಲ ರೀತಿಯಲ್ಲಿ ಆಟಪಾಠಗಳಲ್ಲಿ ತೊಡಗುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಪದ್ಮಾವತಿ ಪಾಟೀಲ್, ಗ್ರಾಂ ಪಂಚಾಯತಿ ಸದಸ್ಯರಾದ ಯಲ್ಲಪ್ಪಗೌಡ್ರ ಸಣ್ಣಪರ್ವತಗೌಡ್ರ, ಮುಕ್ತಮಸಾಬ ಬಡಿಗೇರ, ದಿವಾನಸಾಬ್ ಕಮಾಲಸಾಬನವರ, ಹೊನ್ನಪ್ಪ ಸೋಲಾರಗೊಪ್ಪ, ಶೀತಲ್ ಅ ಬಿಜವಾಡ, ನಿಂಗಪ್ಪ ಯಲಿವಾಳ, ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎಮ್.ಹಗೇದ್, ಶಿಕ್ಷಕರಾದ ಜೆ.ಎನ್.ಕಳ್ಳಿಮನಿ, ಎಂ.ಎಸ್.ಪಟವರ್ಧನ, ಎಸ್.ಎಸ್.ಮಿಕಲಿ, ಬಿ.ಎಸ್.ಹಾವೇರಿ, ವ್ಹಿ.ಕೆ.ದಾಸರ, ಬಿ.ಎಸ್.ಬಸರಕೋಡ, ವ್ಹಿ.ಎಸ್.ಪಟ್ಟಣಶೆಟ್ಟಿ, ಗಿರಿಜಾ ನಾಯ್ಕ, ವಿದ್ಯಾ ಹಲ್ಕುರ್ಕಿ, ಅಂಗನವಾಡಿ ಸಹಾಯಕಿ ಶ್ವೇತಾ ಹರ್ತಿ ಸೇರಿದಂತೆ ಗ್ರಾಮದ ಗುರು-ಹಿರಿಯರು ಸೇರಿದಂತೆ ಮುಂತಾದವರು ಇದ್ದರು.