ಹುಬ್ಬಳ್ಳಿ : ಹು-ಧಾ ಮಹಾನಗರ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಹಾಗೂ ನಗರದೆಲ್ಲೆಡೆ ತೆರೆದುಕೊಂಡಿರುವ ಗುಂಡಿಗಳನ್ನು ಕೂಡಲೇ ಮುಚ್ಚಬೇಕೆಂದು ಒತ್ತಾಯಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಕೊಪ್ಪಿಕರ ರಸ್ತೆಯ ಮಧ್ಯದಲ್ಲಿ ಹೋಮ ಕುಂಡ ನಿರ್ಮಿಸಿ, ಸಂಕಲ್ಪ ಗಣಹೋಮ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು. ಈ ವೇಳೆ ಇಬ್ಬರು ಅರ್ಚಕರಿಂದ ಮಂತ್ರಘೋಷ ಪಟಣದ ಮೂಲಕ ಶಾಸ್ತ್ರೋಕ್ತವಾಗಿ ಗಣಹೋಮ ನೆರವೇರಿಸಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಸುವರ್ಣಲತಾ ಮಣಿಕುಂಟ್ಲಾ, ಸಂದೀಲ್ ಕುಮಾರ್, ಪಕ್ಷದ ಮುಖಂಡರಾದ ಇಮ್ತಿಯಾಜ್ ಮಣಿಯಾರ್, ಪ್ರಕಾಶ ಕುರಹಟ್ಟಿ, ಬಸವರಾಜ ಸೇರಿದಂತೆ ಮುಂತಾದವರು ಇದ್ದರು.