ಹುಬ್ಬಳ್ಳಿ : ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದ್ದಾರೆ.ಇದನ್ನು ಬಿಜೆಪಿ ಪಕ್ಷ ಸ್ವಾಗತ ಮಾಡುತ್ತದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸಾಕಷ್ಟು ವಿಳಂಭವಾಗಿದೆ. ಆದರೂ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟು ನಿಷೇಧ ಮಾಡಿದೆ. ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ದೇಶ ಹಾಗೂ ರಾಜ್ಯ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದ್ದು, ಇದನ್ನು ಎಲ್ಲರೂ ಸ್ವಾಗತಿಸಬೇಕು ಎಂದರು.
ಮತಾಂತರದಿಂದ ಸಾಕಷ್ಟು ಅವಾಂತರವಾಗಿವೆ. ಸಾಕಷ್ಟು ಕುಟುಂಬಗಳು ಮಾನಸಿಕ ಹಿಂಸೆ ಅನುಭವಿಸುತ್ತಿವೆ. ಕಾಂಗ್ರೆಸ್ ಯಾಕೆ ವಿರೋಧಿಸುತ್ತದೆ ಎಂಬ ಬಗ್ಗೆ
ಗೊತ್ತಾಗುತ್ತಿಲ್ಲ. ಇದನ್ನು ಎಲ್ಲರೂ ಸ್ವಾಗತಿಸಬೇಕು. ಅವರಿಗೂ ಇದರ ಸಮಸ್ಯೆ ಗೊತ್ತಿದೆ. ರಾಜಕೀಯಕ್ಕಾಗಿ ವಿರೋಧಿಸದೆ ಸ್ವಾಗತಿಸಬೇಕು.
ಆಮೀಷ ಒಡ್ಡಿ ಮತಾಂತರ ಮಾಡುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಇದರಿಂದ ಸಾಮಾಜಿಕ ಪಿಡುಗು ನಿರ್ನಾಮ ಆದಂತಾಗುತ್ತದೆ ಎಂದರು.
Hubli News Latest Kannada News