ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ಹಾಗೂ ಎಂ ಇ ಎಸ್ ಬ್ಯಾನಗೆ ಅಗ್ರಹಿಸಿ, ಧಾರವಾಡದಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಉಳವಿ ಚೆನ್ನ ಬಸವೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರೆಯವರೆಗೂ ಪ್ರತಿಭಟನೆ ಮೆರವಣಿಗೆಯಲ್ಲಿ ಆಗಮಿಸಿದ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು, ಮೆರವಣಿಗೆಯ ಉದ್ದಕ್ಕೂ ಎಂ ಇ ಎಸ್ ವಿರುದ್ಧ ಧಿಕ್ಕಾರ ಕೂಗಿ, ಎಂಇಎಸ್ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.
ಬೆಳಗಾವಿ ಗಡಿ ಭಾಗದಲ್ಲಿ ಎಂ ಇ ಎಸ್ ಪುಡಾರಿಗಳು ಪುಂಡಾಟ ತೋರಿಸುತ್ತಿದ್ದಾರೆ. ದೇಶ ಭಕ್ತ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನ ಮಾಡಿದ್ದಾರೆ. ಬೆಳಗಾವಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ನಮ್ಮ ರಾಜ್ಯದ ಧ್ವಜ ಸುಟ್ಟು ಅವರ ಮನಸ್ಥಿತಿ ಎಂತಹದೂ ಎಂದು ತೋರಿದ್ದಾರೆ. ಈ ಸಂಘಟನೆಯನ್ನು ಕೂಡಲ್ಲೇ ರಾಜ್ಯದಿಂದ ಬ್ಯಾನ ಮಾಡಬೇಕು, ಜೊತೆಗೆ ಮೂರ್ತಿ ಭಗ್ನ ಮಾಡಿದ ಎಂ ಇ ಎಸ್ ಪುಡರನ್ನು ಗಡಿಪಾರು ಮಾಡಬೇಕು ಎಂದು ಅಗ್ರಹಿಸಿದರು.
ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧವೇ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಂಮತ್ರಿಗಳಿಗೆ ಮನವಿ ಸಲ್ಲಿಸಿದರು.