ಹುಬ್ಬಳ್ಳಿ: ದಿನಬಳಕೆ ವಸ್ತುಗಳು , ಪೆಟ್ರೋಲ್ , ಎಲ್.ಪಿ.ಜಿ . ಡಿಸೇಲ್ ಬೆಲೆ ಏರಿಕೆ , ನಿಯಂತ್ರಿಸುವದು ಹಾಗೂ ಆಟೋ ಚಾಲಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರುಈ ಪ್ರತಿಭಟನೆ ನಡೆಸಿದರು
ನಗರದ ತಹಶೀಲ್ದಾರ್ ಕಚೇರಿ ಎದರು ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ದಿನೇ ದಿನೇ ಕಳೆದಂತೆ ಡಿಸೇಲ್ , ಪೆಟ್ರೋಲ , ಏರುತ್ತಿರುವದರಿಂದ ಆಟೋ ರಿಕ್ಷಾಗಳನ್ನ ನಂಬಿ ಬದುಕಿ ಜೀವನ ನಡೆಸುತ್ತಿರುವ ಆಟೋ ಚಾಲಕರ ಮತ್ತು ಮಾಲಕರು ಉಪಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ . ಸಾರ್ವಜನಿಕ ಸೇವೆ ಸಲ್ಲಿಸುತ್ತಾ ಬಂದಿರುವ ಆಟೋ ಚಾಲಕರಿಗೆ ಪದೇ ಪದೇ ಬೆಲೆ ಏರಿಕೆ ಮಾಡಿದರೆ , ಬಹಳ ಹೊರೆ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ . ಬಡ ಆಟೋ ಚಾಲಕರು ಆಟೋ ರಿಕ್ಷಾಗಳ ಮೇಲೆ ಅವಲಂಬಿತರಾಗಿದ್ದಾರೆ . ಆಟೋ ರಿಕ್ಷಾಗಳಿಗೆ ನಿಗದಿತ ಬೆಲೆ ಇರುತ್ತದೆ . ಪದೆ ಪದೇ ಪೆಟ್ರೋಲ್ , ಎಲ್.ಪಿ.ಜಿ. , ಡಿಸೇಲ್ ಬೆಲೆ ಏರುತ್ತಾ ಸಾಗಿದರೆ ಚಾಲಕರು ಮತ್ತು ಗ್ರಾಹಕರಲ್ಲಿ ತೊಂದರೆಗಳು ಹುಟ್ಟಿಹಾಕುವಂತ ಪರಿಸ್ಥಿತಿ ಕೇಂದ್ರ ಸರಕಾರ ತಂದು ಕೊಟ್ಟಂತಾಗುತ್ತದೆ . ಇದರಿಂದ ವಾಹನ ಚಾಲಕರ ಹೊಟ್ಟೆ ಮೇಲೆ ಬರೆ ಎಳದಂತಾಗಿದೆ . ಕೊಡಲೇ ಪೆಟ್ರೋಲ್ , ಎಲ್.ಪಿ.ಜಿ. , ಡಿಸೇಲ್ ಬೆಲೆ ಇಳಿಕೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.