ಹುಬ್ಬಳ್ಳಿ : ಬೆಂಗಳೂರಿನ ಸದಾಶಿವ ನಗರದ ಸ್ಯಾಂಕಿ ಟ್ಯಾಂಕಿ ರಸ್ತೆಯಲ್ಲಿರುವ ಛತ್ರಪತಿ ಶಿವಾಸಿ ಮೂರ್ತಿಗೆ ಅಪಮಾನ ಹಾಗೂ ನಿನ್ನೆ ಬೆಳಗಾವಿ ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿರುವ ದುಷ್ಟರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಉತ್ತರ ಕರ್ನಾಟಕ ಹಿಂದೂ ಪರಿಷದ್ ತಹಶೀಲ್ದಾರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿತು.
ನಗರದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು
ಶಿವಾಜಿ ಅವರ ಪ್ರತಿಮೆಗೆ ಅಪಮಾನಗೊಳಿಸಿದ್ದು ಹಾಗೂ ಬೆಳಗಾವಿಯ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ್ದು, ಇಂತಹ ದುಷ್ಟರು ರಾಜ್ಯದ ಅಶಾಂತಿಗೆ ಕಾರಣೀಕರ್ತರಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಲಾಯಿತು.
ಅಲ್ಲದೇ ರಾಜ್ಯದ ಜನರ ನೆಮ್ಮದಿ ಹಾಗೂ ಭಾವನೆಗಳಿಗೆ ಧಕ್ಕೆ ತಂದಂತಹ ದುಷ್ಟರನ್ನು ಶೀಘ್ರವೇ ಬಂಧಿಸಬೇಕು, ಇಲ್ಲದಿದ್ದರೆ ಉತ್ತರ ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂದು ಹಿಂದೂ ಪರಿಷದ್ ಎಚ್ಚರಿಸಿದೆ.
Hubli News Latest Kannada News