ಹುಬ್ಬಳ್ಳಿ : ಫಿನೋ ಪೇಮೆಂಟ್ ಬ್ಯಾಂಕನಿಂದ ಕರ್ನಾಟಕದಲ್ಲಿ ಆಧಾರ ದೃಢೀಕರಣ ಆಧಾರಿತ ಡಿಜಿಟಲ್ ಉಳಿತಾಯ ಖಾತೆ ‘ ಆರಂಭ ‘ ಪ್ರಾರಂಭಿಸಲಾಗಿದೆ . ಇದರ ಮೂಲಕ ಗ್ರಾಹಕರು ಸುಲಭವಾಗಿ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದೆಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷಹಿಮಾಂಶು ಮಿಶ್ರಾ ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು , ಗ್ರಾಮೀಣ , ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಆರಂಭ ಉಳಿತಾಯ ಖಾತೆ ಪ್ರಾರಂಭಿಸಿದೆ . ಇದು ಶೂನ್ಯ ಬ್ಯಾಲೆನ್ಸ್ ಖಾತೆಯಾಗಿದ್ದು , ಇದು ಕನಿಷ್ಟ ಖಾತೆಯ ಬ್ಯಾಲೆನ್ಸ್ ( ಎಂಎಬಿ ) ಅವಶ್ಯಕತೆ ಮತ್ತು ಡೆಬಿಟ್ ಕಾರ್ಡ್‌ನ ಅಗತ್ಯ ನಿವಾರಿಸುತ್ತದೆ . ಗ್ರಾಹಕರು ಈ ಖಾತೆ ತೆರೆಯಲು ಹತ್ತಿರದ ಫಿನೋ ಶಾಖೆ ಅಥವಾ ಏನೋ ಅಧಿಕೃತ ವ್ಯಾಪಾರಿ ಬಳಿಗೆ ಭೇಟಿಕೊಟ್ಟು ತಮ್ಮ ಆಧಾರ ಕಾರ್ಡ್‌ನೊಂದಿಗೆ ಖಾತೆ ತೆರೆಯಬಹುದು . ಇದರ ನಾಮಮಾತ್ರ ವಾರ್ಷಿಕ ನಿರ್ವಹಣೆ ಶುಲ್ಕ 99 ರೂ . ಆಗಿದೆ ಎಂದರು . ಈ ಖಾತೆಯಡಿ ವೃದ್ಧಾಪ್ಯ ಪಿಂಚಣಿ , ಎಂಜಿಎನ್ ಆರ್‌ಇಜಿಎ , ಪಿಎಂ ಕಿಸಾನ್ ಸಮ್ಮಾನ್ ನಿಧಿ – ಸೇರಿದಂತೆ ವಿವಿಧ ನೇರ ಲಾಭ ( ಡಿಬಿಟಿ ) ಯೋಜನೆಗಳಲ್ಲಿ ಕೆಲಸ ಮಾಡುವ ಫಲಾನುಭವಿಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಾಗುವುದು.
ಫಿನೋ ಪಾಯಿಂಟ್ ಗಳು ಮರ್ಚಂಟ್ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಸೌಕರ್ಯ ಮತ್ತು ಅನುಕೂಲತೆ ನೀಡುತ್ತವೆ . ಇದು ಅಂತರ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲಿದೆ . ರಾಜ್ಯದ ಪ್ರತಿ ಗ್ರಾಪಂಗಳಲ್ಲಿ ಬ್ಯಾಂಕ್‌ನ ಮರ್ಚಂಟ್ಸ್ ಇದ್ದಾರೆ . ಬ್ಯಾಂಕಿನ 40 ಸಿಬ್ಬಂದಿಯಿದ್ದು , ಪ್ರತಿ ಜಿಲ್ಲೆಯಲ್ಲಿ ಒಬ್ಬರು ಇದ್ದಾರೆ . ಉತ್ತರ ಕರ್ನಾಟಕದಲ್ಲಿ 5 ಸಾವಿರ ಪಾಯಿಂಟ್ . ಇವೆ . ಮುಂದಿನ ವರ್ಷದೊಳಗೆ ಇದನ್ನು ದುಪ್ಪಟ್ಟು ಮಾಡುವ ಯೋಚನೆ ಇದೆ . ದೇಶಾದ್ಯಂತ 8.4 ಲಕ್ಷ ಮಳಿಗೆಗಳಿವೆ ಎಂದರು .
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಕರ್ನಾಟಕ , ಮಹಾರಾಷ್ಟ್ರ ವಲಯದ ಮುಖ್ಯಸ್ಥ ಉಮೇಶ ಕದಂ , ಉತ್ತರ ಕರ್ನಾಟಕ ಭಾಗದ ಹಿರಿಯ ವ್ಯವಸ್ಥಾಪಕ ಸುರೇಶ ರಾಠೋಡ , ಹುಸೇನ ಗುಬ್ಬಿ ಉಪಸ್ಥಿತರಿದ್ದರು.