ಹುಬ್ಬಳ್ಳಿ: ಇಂದು ರಾಜ್ಯದಾದ್ಯಂತ ತೆರೆ ಕಂಡ ಬ್ರೇಕ್ ಫೇಲ್ಯೂರ್ ಸಿನಿಮಾ ಜನರ ಮನಸ್ಸಿಗೆ ಹತ್ತಿರವಾಗಿದೆ.
ಈ ಸಿನಿಮಾವನ್ನು ಅಬ್ದುಲ್ ಗಣಿ ತಾಳಿಕೋಟಿ ಅವರು ನಿರ್ಮಾಣ ಮಾಡಿದ್ದಾರೆ. ನಾಯಕ ನಟರಾಗಿ ಹುಬ್ಬಳ್ಳಿ ಹುಡುಗ ಸುರೇಶ್ ಕಾಣಿಸಿಕೊಂಡಿದ್ದು , ಕೃತಿ ಗೌಡ ನಟಿಯಾಗಿ ಬಣ್ಣ ಹಚ್ಚಿದ್ದಾರೆ.
ಇನ್ನು ಉತ್ತರ ಕರ್ನಾಟಕ ಭಾಗದ ಕಲಾವಿದರೇ ಸೇರಿಕೊಂಡು ನಿರ್ಮಿಸಿರುವ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಿತ್ರದ ಮುಖ್ಯ ಭೂಮಿಕೆಯಲ್ಲಿ ಉಗ್ರಂ ರವಿ, ನವೀನ, ಸುರೇಶ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.
ಈ ಸಿನಿಮಾವು ಅರಣ್ಯ ಜೀವನದ ಕುರಿತು ಬೆಳಕು ಚೆಲ್ಲುವ ಸಿನಿಮಾವಾಗಿದ್ದು, ಯಾವ ರೀತಿ ಪರಿಸರದೊಂದಿಗೆ ಮಾನವನ ಸಂಬಂಧ, ಭಾವನೆ ಇರುತ್ತದೆ. ಬದಲಾದಂತೆ ಆಧುನಿಕ ಜೀವನಕ್ಕೆ ಮನುಷ್ಯ ಯಾವ ರೀತಿ ಬದಲಾವಣೆ ಆಗಿದ್ದಾನೆ ಎಂಬ ಅಂಶಗಳನ್ನು ಚಿತ್ರದಲ್ಲಿ ಕಾಣಬಹುದು. ಬ್ರೇಕ್ ಫೇಲ್ಯೂರ್ ಚಿತ್ರ ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಎಂದು ಚಿತ್ರದ ನಾಯಕಿ ಕೃತಿ ಗೌಡ ತಿಳಿಸಿದ್ದಾರೆ .
ಈಗಾಗಲೇ ಚಿತ್ರದ ಹಾಡುಗಳಿಂದ ಹೆಚ್ಚು ಗಮನ ಸೆಳೆದಿದ್ದ ಸಿನಿಮಾವನ್ನು ಇಂದು ನಗರದ ಶೃಂಗಾತ ಚಿತ್ರಮಂದಿರದಲ್ಲಿ ಬ್ರೇಕ್ ಫೆಲ್ಯೂರ್ ಚಿತ್ರ ತಂಡ ಸಾರ್ವಜನಿಕರೊಂದಿಗೆ ಚಿತ್ರವನ್ನು ವೀಕ್ಷಿಸಿತು. ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹುಬ್ಬಳ್ಳಿಯ ಹುಡುಗ ಸುರೇಶ್ “ಇದೊಂದು ಪಕ್ಕ ಫ್ಯಾಮಿಲಿ ಎಂಟರ್ಟೈನಮೆಂಟ್ ಚಿತ್ರವಾಗಿದ್ದು,ಎಲ್ಲರೂ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ಭೇಟಿನೀಡಿ ಎಂದು ತಿಳಿಸಿದರು”.
Hubli News Latest Kannada News