ಹುಬ್ಬಳ್ಳಿ : ಶೂಟೋಕಾನ್ ಕರಾಟೆ ಸಂಸ್ಥೆಯ ವತಿಯಿಂದ ದಿ.ಪುನೀತ್ ರಾಜಕುಮಾರ ಅವರ ಸ್ಮರಣಾರ್ಥವಾಗಿ ಮೂರನೇ ರಾಷ್ಟ್ರೀಯ ಮಟ್ಟದ ಕರಾಟೆ ಮುಕ್ತ ಚಾಂಪಿಯನ್ ಶಿಪ್ ಸ್ಪರ್ಧೆಯನ್ನು ನ. 27 ಮತ್ತು 28 ರಂದು ಇಲ್ಲಿನ ಹೊಸ ಕೋರ್ಟ್ ಚೈತನ್ಯ ಸ್ಪೋರ್ಟ್ಸ್ ಫೌಂಡೇಶನ್ ನಲ್ಲಿ ಆಯೋಜಿಸಲಾಗಿದ್ದು ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾಡುವರು ಎಂದು ಎಂದು ಸಂಯೋಜಕ ದುರ್ಗಾನಂದ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಕರಾಟೆ ಮುಕ್ತ ಚಾಂಪಿಯನ್ ಶಿಪ್ ಸ್ಪರ್ಧೆ ಯನ್ನು ನ.27 ರಂದು ಬೆಳಿಗ್ಗೆ 10 ಗಂಟೆಗೆ ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಸ್ವರ್ಣ ಗ್ರುಪ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಸಿ.ಎಚ್.ವ್ಹಿ.ಎಸ್.ವ್ಹಿ ಪ್ರಸಾದ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ನವೀನ ನಾಗಪ್ಪ ಆಗಮಿಸುವರು, ವಿಶೇಷ ಆಮಂತ್ರಕರಾಗಿ ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ವಿಪ ಸದಸ್ಯ ನಾಗರಾಜ ಛಬ್ಬಿ, ಬಸವರಾಜ ಗುರಿಕಾರ, ಶ್ರೀಕಾಂತ ಮಲ್ಲೂರ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ನ.28 ರಂದು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಶಂಕರಪಾಟೀಲ ಮುನೇನಕೊಪ್ಪ, ರಮಣ ಮೂರ್ತಿ, ಮುತ್ತಣ್ಣ ಶಿವಳ್ಳಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಆಗಮಿಸಲಿದ್ದು, ಮಹಾರಾಷ್ಟ್ರ, ಕೇರಳ ಗೋವಾ ಸೇರಿದಂತೆ ದೇಶದ ವಿವಿಧ ರಾಜ್ಯ, ಜಿಲ್ಲೆಗಳ ಸುಮಾರು 50 ಕ್ಕೂ ಹೆಚ್ಚು ಕರಾಟರ ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಜೀತ , ಆರ್ಥರ್, ಗಣೇಶ ಸೇರಿದಂತೆ ಮುಂತಾದವರು ಇದ್ದರು.
ಜಾಹಿರಾತು…