ಹುಬ್ಬಳ್ಳಿ: ಸುಮಂತ್ ಶೈಲೇಂದ್ರ ನಟಿಸಿರುವ ಕಾಮಿಡಿ, ಥ್ರಿಲ್ಲರ್ ಕಥಾಹಂದಿರವನ್ನು ಒಳಗೊಂಡಿರುವ ಗೋವಿಂದ ಗೋವಿಂದ ಇದೇ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ತಿಲಕ್ ಹಾಗೂ ಚಿತ್ರ ನಟ ಸುಮಂತ್ ಶೈಲೇಂದ್ರ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಜಂಟಿಯಾಗಿ ಮಾತನಾಡಿದ ಅವರು, ತಿರುಪತಿ ಎಕ್ಸ್‌ಪ್ರೆಸ್ ನಂತರದಲ್ಲಿ ಹಾಸ್ಯಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದು, ವಿಜಯ್ ಚೆಂಡೂರ್ ಹಾಗೂ ಪವನಕುಮಾರ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ರೂಪೇಶ ಶೆಟ್ಟಿ ನಟಿಸಿದ್ದಾರೆ ಎಂದರು.
ಶೈಲೇಂದ್ರ ಪ್ರೊಡಕ್ಷನ್, ಎಲ್.ಜಿ.ಕ್ರಿಯೇಷನ್ ಹಾಗೂ ರವಿ ಗರಣಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕನಾಗಬೇಕೆಂದು ಹೊರಟ ಯುಕನೊಬ್ಬ ತನ್ನ ಕಲ್ಪನೆಯಲ್ಲಿ ಮಾಡಿಕೊಂಡಿರುವ ಕಥಾ ಹಂದರದಲ್ಲಿ ಚಿತ್ರ ಮೂಡಿಬಂದಿದ್ದು, ಬಿಜಾಪುರದಿಂದ ಬೆಂಗಳೂರಿಗೆ ಬರುವ ಮೂವರು ಪಡ್ಡೆ ಹುಡುಗರು, ಪ್ರತಿಭಾವಂತ ನಿರ್ದೇಶಕ ಹಾಗೂ ಟಾಫ್ ಮೋಸ್ಟ್ ಹಿರೋಯಿನ್ ಒಬ್ಬಳ ಜೀವನದ ಎಂಟ್ರಿ ಕೊಟ್ಟಾಗ ಅವರ ಜೀವನದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿದೆ ಎಂದು ಅವರು ಹೇಳಿದರು.
ಜಾಹಿರಾತು…