ಹುಬ್ಬಳ್ಳಿ: ನಾಳೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕನ್ನಡ ನಾಡಿನ ಹೆಮ್ಮೆಯ ಪುತ್ರರಾಗಿರುವ ನಾಡೋಜ್ ಡಾ.ಮಹೇಶ ಜೋಶಿ ಅವರು ಸ್ಪರ್ಧಿಸಿದ್ದು ಅವರನ್ನು ನಾಡಿನ ಜನತೆ ಬೆಂಬಲಿಸುವಂತೆ ವಿಶ್ವ ವಿಪ್ರ ಸೇವಾ ಟ್ರಸ್ಟ್ ನ ಅಧ್ಯಕ್ಷ ಲಕ್ಷ್ಮಣ ಚಿದಂಬರಂ ಕುಲಕರ್ಣಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಡಾ.ನಾಡೋಜ್ ಜೋಶಿ ಅವರು ದೂರದರ್ಶನವನ್ನು ಸಮೀಪ ದರ್ಶನವಾಗಿ ಮಾಡಿದ ಮತ್ತು ಕನ್ನಡ ನೆಲ ಜಲ ರಕ್ಷಣೆಗೆ ಕಟ್ಟಿಬದ್ದರಾಗಿ ನಿಂತ ನಾಡೋಜ ಡಾ.ಜೋಶಿ ಅವರನ್ನು ಸಮಸ್ತ ಕನ್ನಡಿಗರು ಅತ್ಯಂತ ಹೆಚ್ಚು ಅಂತರದಿಂದ ಗೆಲ್ಲಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡ ನಾಡಿನ ಜನಸಾಮಾನ್ಯರ ಪರಿಷತ್ತನ್ನಾಗಿ ಪರಿವರ್ತಿಸಲು ಸರ್ವಕನ್ನಡಿಗರು ಬೆಂಬಲಿಸಬೇಕೆಂದು ವಿನಂತಿದರು. ಈ ಸಂದರ್ಭದಲ್ಲಿ ವಿಶ್ವ ವಿಪ್ರ ಸೇವಾ ಟ್ರಸ್ಟ್ ನ ಸಹ ಕಾರ್ಯದರ್ಶಿ ಪವನ್ ದೇಸಾಯಿ ಇದ್ದರು.
ಜಾಹಿರಾತು…