ಹುಬ್ಬಳ್ಳಿ: ಗೂಗಲ್ ಮ್ಯಾಪ್ ನೊಡಿಕೊಂಡು ಮುಂಬೈ ನಿಂದ ಬಳ್ಳಾರಿಗೆ ಹೊರಟಿದ್ದ ಆಯಿಲ್ ಕ್ಯಾಂಟರ್ ವಾಹನವೊಂದು ತಪ್ಪು ಮಾಹಿತಿಯಿಂದ ಬೆರೆ ದಾರಿಯಲ್ಲಿ ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು.ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಹೀಗಾಗಿ ಗದಗ ರಸ್ತೆಗೆ ಹೋಗ ಬೇಕಿದ್ದ ಕ್ಯಾಂಟರ್ ವಾಹ ಗೂಗಲ್ ಮ್ಯಾಪ್ ನೊಡಿಕೊಂಡು ನಗರದ ದೇಶಪಾಂಡೆ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಬ್ರೀಡ್ಜ ಬಳಿ ಬಂದಿದೆ.
ಹೊಸ್ ಬ್ರಿಡ್ಜ ನಿಂದ ಭವಾನಿ ನಗರಕ್ಕೆ ಹೊರಟಿದ್ದ ಆಯಿಲ್ ತುಂಬಿಕೊಂಡಿರುವ ವಾಹನ ಆಕೃತಿ ಅಪಾರ್ಟ್ ಮೆಂಟ್ ನ ಹಿಂಭಾಗದಲ್ಲಿ ಮಣ್ಣಿನಲ್ಲಿ ಸಿಲುಕಿಕೊಂಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ಐದು ಘಂಟೆಯಿಂದ ಕ್ಯಾಂಟರ್ ವಾಹನ ಸಿಲುಕಿಕೊಂಡಿದೆ. ಎಷ್ಟೇ ಪ್ರಯತ್ನ ಪಟ್ಟರು ಕೂಡ ವಾಹನ ಹೊರ ಬರುತ್ತಿಲ್ಲ. ಕ್ಯಾಂಟರನ ಚಕ್ರಗಳು ಸಿಲುಕಿಕೊಂಡಿದ್ದು, ಜೆಸಿಬಿಯಿಂದ ಹೊರ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಕ್ರೇನ ಮುಖಾಂತರ ವಾಹನವನ್ನು ಹೊರ ತೆಗೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ
ಜಾಹಿರಾತು…