Home / Top News / ಪರಿಷತ್ ಚಯನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ- ಬಿ ಎಸ್ ಯಡಿಯೂರಪ್ಪ ವಿಶ್ವಾಸ

ಪರಿಷತ್ ಚಯನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ- ಬಿ ಎಸ್ ಯಡಿಯೂರಪ್ಪ ವಿಶ್ವಾಸ

Spread the love

ಹುಬ್ಬಳ್ಳಿ: ಈಗಾಗಲೇ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಈ ಬಾರಿ ಪರಿಷತ್ ಚುನಾವಣೆಯಲ್ಲಿ ನಾವು 20 ಸೀಟುಗಳನ್ನು ಹಾಕಲಿದ್ದೇವೆ. ಅದರಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾವಿದೆ. ಇದರ ಜೊತೆಗೆ ನಾವು ವಿಧಾನ ಪರಿಷತ್ ನಲ್ಲೂ ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು,ಇಂದು ಎರಡನೇ ದಿನದ ಜನಸ್ವರಾಜ್ ಸಮಾವೇಶ. ನಾಳೆ ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ. ಇದರ ನಡುವೆ ಈಗ ಪರಿಷತ್ ಚುನಾವಣೆ ನಡೆಯುತ್ತಿದ್ದು, ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು ಸ್ಥಳೀಯ ಜನಪ್ರತಿನಿಧಿಗಳನ್ನು ಮನವೊಲಿಸಬೇಕು ಎಂದು ಈ ವೇಳೆ ಕರೆ ನೀಡಿದರು. ‌

*ಇವತ್ತು ಬಹಳ ಐತಿಹಾಸಿಕ ದಿನ.*

ರೈತ ಸಮೂಹಕ್ಕೆ ನೆರವು ನೀಡುವ ಕೆಲಸವನ್ನ ಪ್ರಧಾನಿ ನರೇಂದ್ರವ ಮೋದಿ ಮಾಡಿದ್ದಾರೆ.
ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 7502ಚುನಾಯಿತರು ಇಲ್ಲಿದ್ದೀರಿ. ಕನಿಷ್ಟ 5000ಸಾವಿರ ಜನ ನಮ್ಮ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದರು.

*ಕಾಂಗ್ರೆಸ್ ಈಗ ತನ್ನ ಅಸ್ತತ್ವ ಕಳೆದುಕೊಂಡಿದೆ.*

ಮಹಿಳಾ ಸಬಲೀಕರಣ ಪ್ರಧಾನಿಗಳ ಅಪೇಕ್ಷೆ ಇದೆ.
ಅದನ್ನ ಮಹಿಳೆಯರು ಸದುಪಯೋಗ ಮಾಡಿಕೊಡಬೇಕು. ಹಣ, ಹೆಂಡ, ತೋಳ ಬಲ್ ಹಾಗೇ ಜಾತಿ ವಿಷ ಬೀಜ ಬಿತ್ತಿದ ಕಾಂಗ್ರೆದ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಲೋಕಸಭೆಯಲ್ಲಿ ಕೇವಲ 20ಜನ ಇದ್ದಾರೆ. ಮುಂದಿನ ದಿನಗಳಲ್ಲೂ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಹೀಗಾಗಿ ಜನ ಅದರಲ್ಲಿ ಇರಲು ಬಯಸಲ್ಲ. ವಿಧಾನ ಪರಿಷತ್‌ನಲ್ಲೂ ನಮಗೆ ಬಹುಮತ ಬರಬೇಕಿದೆ. ಅದಕ್ಕೆ ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡಬೇಕು.
ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ರೆ ನಮ್ಮ ಅಭ್ಯರ್ಥಿ ಬಹುಮತದಿಂದ ಗೆಲ್ತಾರೆ. ಇಡೀ ಪ್ರಪಂಚ ಪ್ರಧಾನಿ ಮೋದಿ ನಾಯಕತ್ವವನ್ನ ಸ್ವಾಗತ ಮಾಡುತ್ತಿದೆ. ಧೀಮಂತ ನಾಯಕ ಮೋದಿ ಪಕ್ಷದ ಸದಸ್ಯರು ನಾವು ಅನ್ನೋದೇ ಹೆಮ್ಮೆಯ ಸಂಗತಿ ಎಂದರು.

*ಅಧಿಕಾರ ಇಲ್ಲದಿದ್ದರೂ ಜನ ನನ್ನ ಕೈ ಬಿಟ್ಟಿಲ್ಲ.*

ಇಂದು ನಾನು ಅಧಿಕಾರದಲ್ಲಿಲ್ಲ. ಹಿಂದೆ ಮುಂದೆ ನೋಡದೇ ರಾಜೀನಾಮೆ ನೀಡಿ ಬೊಮ್ಮಯಿಗೆ ಅನುಕೂಲ ಮಾಡಿಕೊಟ್ಟೆ.ಆದರೆ ಜನ ನನ್ನ ಕೈ ಬಿಟ್ಟಿಲ್ಲ ಅನ್ನೋದೇ ಸಂತೋಷದ ಸಂಗತಿ. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಮಾಡುತ್ತೇನೆ. ಪಕ್ಷ ಬಲ ಪಡಿಸೋಕೆ ರಾಜ್ಯ ಪ್ರವಾಸ. ಎಲ್ಲರೂ ಒಂದಾಗಿ ವಿ.ಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

 

ಜಾಹಿರಾತು…

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]