ಹುಬ್ಬಳ್ಳಿ : ಹಗರಣದಲ್ಲಿ ಯಾರೇ ಭಾಗವಹಿಸಿದರೂ ಪ್ರಧಾನಿ ಮೋದಿಯವರು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಮತ್ತು ದಾಖಲೆ ಇದ್ದರೆ ಕೊಡಲಿ. ಯಾವುದೇ ಪಕ್ಷದವರು ಕೊಟ್ಟರೂ ನಿಶ್ಚಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.
ಬಿಟ್ ಕಾಯಿನ್ ಪ್ರಕರಣ ವಿಚಾರವಾಗಿ ನಗರದಲ್ಲಿಂದು ಮಾತನಾಡಿದ ಅವರು, ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲಾ. ಕಾಂಗ್ರೆಸ್ ನಲ್ಲಿ ಎರಡು ಬಣಗಳು ಇರುವುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್ ನಲ್ಲಿ ಬಡೆದಾಟ ಆರಂಭಗೊಂಡಿದೆ. ಅದರಲ್ಲೇನೂ ಮುಚ್ಚು ಮರೆಯಿಲ್ಲ ಎಂದರು.
ಕಾಂಗ್ರೆಸ್ ಬಡಿದಾಟದ ಬಗ್ಗೆ ಟೀಕೆ ಟಿಪ್ಪಣಿ ಮಾಡೋಕೆ ಹೋಗಲ್ಲ. ವಿರೋಧ ಪಕ್ಷದವರ ವಿರುದ್ಧ ಹೇಳಿಕೆ ನೀಡುವುದಿಲ್ಲ ಎಂದು ಅವರು ಹೇಳಿದರು.
ಬೆಳೆ ಹಾನಿಯ ಕುರಿತು ಮಾತನಾಡಿದ ಅವರು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಅಧಿಕಾರಿಗಳಿಗೆ ಸಮೀಕ್ಷೆ ಮಾಡಲು ಸೂಚಿಸಿದ್ದಾರೆ. ಎಲ್ಲಿ ಬೆಳೆನಾಶವಾಗಿದೆಯೋ ಪರಿಹಾರ ಕೊಡೋಕೆ ಕ್ರಮ ಕೈಗೊಳ್ಳುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜಾಹಿರಾತು…