ಹುಬ್ಬಳ್ಳಿ: ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಉಮಾ ಹಾಗೂ ಎಂ.ರಮೇಶ ರೆಡ್ಡಿ ನಿರ್ಮಿಸಿರುವ 100 ಶೀರ್ಷಕೆಯ ಕನ್ನಡ ಚಿತ್ರ ಇದೇ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಟ ಹಾಗೂ ಚಿತ್ರ ನಿರ್ದೇಶಕ ರಮೇಶ ಅರವಿಂದ ಹೇಳಿದರು.
ನಗರದಲ್ಲಿಂದು ಖಾಸಗಿ ಹೊಟೇಲ್ ನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಿತ್ರದ ನಿರ್ದೇಶನವನ್ನು ಮಾಡುವ ಮೂಲಕ ಚಿತ್ರದಲ್ಲಿ ನನ್ನ ಎಲ್ಲ ಶಕ್ತಿಯನ್ನು ಹಾಕಿ ನಟಿಸಿದ್ದೇನೆ ಎಂದರು.
ಚಿತ್ರದಲ್ಲಿ ರಚಿತಾ ರಾಮ್, ಪೂರ್ಣ, ವಿಶ್ವಕರ್ಣ, ಮಾಲತಿ ಸುಧೀರ್, ಗೌರವ ಪ್ರಕಾಶ ಬೆಳವಾಡಿ, ರಾಜು ತಾಳಿಕೋಟಿ, ಶೋಭರಾಜ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅಲ್ಲದೇ ಪ್ರಸ್ತುತ ದಿನಮಾನಗಳಲ್ಲಿ ನಡೆಯುವ ಸಾಮಾಜಿಕ ಜಾಲತಾಣದ ವಿಷಯ ವಸ್ತುಗಳನ್ನು ಒಳಗೊಂಡ ಕಥಾ ಹಂದಿರವೇ ಈ 100 ಸಿನಿಮಾ ಎಂದು ಅವರು ಹೇಳಿದರು.
ಒಟ್ಟು ನಾಲ್ಕು ಹಾಡುಗಳನ್ನು ಹೊಂದಿರುವ ಚಿತ್ರವಾಗಿದ್ದು, ಸಿನಿ ಪ್ರೀಯರಿಗೆ ಹೊಸ ಅನುಭವ ಹಾಗೂ ಹೊಸ ಚಿತ್ರ ಪರಿಚಯವನ್ನು ಮಾಡುವ ವಿನೂತನ ಪ್ರಯತ್ನವೊಂದನ್ನು ಮಾಡಿದ್ದೇವೆ ಎಂದರು.
ಜಾಹಿರಾತು…