Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು’ ಮಕ್ಕಳ ಸಿನಿಮಾ 19 ರಂದು ಬಿಡುಗಡೆಗೆ ಸಿದ್ಧತೆ

ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು’ ಮಕ್ಕಳ ಸಿನಿಮಾ 19 ರಂದು ಬಿಡುಗಡೆಗೆ ಸಿದ್ಧತೆ

Spread the love

ಹುಬ್ಬಳ್ಳಿ: ಪಾತಿ ಫಿಲ್ಮ್ ನಿರ್ಮಾಣದ ‘ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು’ ಮಕ್ಕಳ ಸಿನಿಮಾ ನ.19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಗುಲಬರ್ಗಾದಲ್ಲಿ ನಡೆದ ಸತ್ಯ ಘಟನೆ ಆಧಾರಿತ ಸಿನಿಮಾ ‘ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು’, ಮಕ್ಕಳನ್ನು ಕಳ್ಳತನ ಮಾಡಿ ಅವರಿಂದ ಭಿಕ್ಷಾಟನೆ ಮಾಡಿಸುತ್ತಿದ್ದ ಕುರಿತು ಸುದ್ದಿ ನೋಡಿ ಈ ಸಿನಿಮಾ ಮಾಡಲಾಗಿದೆ. ಈಗಾಗಲೇ 2019-20 ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 130 ಕನ್ನಡ ಚಿತ್ರಗಳಲ್ಲಿ ಆಯ್ಕೆಯಾದ ಏಕೈಕ ಮಕ್ಕಳ ಚಿತ್ರವಾಗಿದೆ. ಎಲ್ಲ ಪೋಷಕರು ಹಾಗೂ ಮಕ್ಕಳು ನೋಡಬೇಕಾದ ಸಿನಿಮಾ ಇದಾಗಿದೆ ಎಂದರು.

ಚಿತ್ರದ ನಿರ್ದೇಶಕ ಭಾರತೀ ಶಂಕರ ಎಂ.ಪಿ ಮಾತನಾಡಿ, ನನ್ನ ಹೆಸ್ರು ಕಿಶೋರ್ ಏಳ್ ಪಾಸ್ ಎಂಟು ಸಿನಿಮಾವನ್ನು ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಹಿರಿಯ ನಟರಾದ ದತ್ತಣ್ಣ, ತಬಲಾ ನಾಣಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡ್ರಾಮಾ ಜ್ಯೂನಿಯರ್ ಖ್ಯಾತಿಯ ಮಹೇಂದ್ರ, ಶಶಿ ಸೇರಿದಂತೆ ಮುಂತಾದ ಹುಡುಗರು ಚಿತ್ರದಲ್ಲಿ ನಟನೆ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹೇಂದ್ರ, ಶಶಿ ಇದ್ದರು.

 

 

 

ಜಾಹಿರಾತು…

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]