Home / Top News / ರಾಹುಲ್ ಗಾಂಧಿ ಒಂದು ತಿಂಗಳು ಇಟಲಿಗೆ ಹೋಗುವವರಿದ್ದಾರೆ : ಪ್ರಹ್ಲಾದ್ ಜೋಶಿ ವ್ಯಂಗ್ಯ

ರಾಹುಲ್ ಗಾಂಧಿ ಒಂದು ತಿಂಗಳು ಇಟಲಿಗೆ ಹೋಗುವವರಿದ್ದಾರೆ : ಪ್ರಹ್ಲಾದ್ ಜೋಶಿ ವ್ಯಂಗ್ಯ

Spread the love

ಧಾರವಾಡ: ದೇಶದಲ್ಲಿ 29 ಕಡೆಗಳಲ್ಲಿ ಚುನಾವಣೆಗಳು ನಡೆದಿವೆ, ಅದರಲ್ಲಿ ಎನ್ ಡಿ ಎ ಮೈತ್ರಿ ಕೂಟ 12 ರಲ್ಲಿ ಗೆಲ್ಲುವು ಸಾಧಸಿದೆ. ಆದರೆ ಕಾಂಗ್ರೆಸ್ ಪಕ್ಷ ರಾಜಸ್ಥಾನ ಮತ್ತು ಹಿಮಾಚ ಪ್ರದೇಶ ಬಿಟ್ಟರೆ ಬೇರೆಲ್ಲೂ ಗೆದ್ದಿಲ್ಲ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಕೂಡಾ ಕಾಂಗ್ರೆಸ್ ಪಕ್ಷ ಆಡಳಿತ ಅವಧಿಯಲ್ಲಿಯೇ ಆಗಿದೆ. ಆದರೆ ಈಗ ನಾವು ಅಬಕಾರಿ ಸುಂಕವನ್ನು ಕಡಿಮೆ ಮಾಡಿ, ಜನರಿಗೆ ಬೆಲೆ ಏರಿಕೆಯಿಂದ ಆಗುತ್ತಿರುವ ಹೊರೆಯನ್ನು ಕಡಿಮೆ ಮಾಡಿದ್ದೇವೆ. ಈಗ ರಾಹುಲ್ ಗಾಂಧಿಯವರು ಇಟಲಿಗೆ ಹೋಗಿರಬಹುದು. ಅವರು ಇಟಲಿಯಲ್ಲಿ ಒಂದು ತಿಂಗಳವರೆಗೆ ಹೋಗುವವರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವ್ಯಂಗ್ಯವಾಡಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ನಾವು ತೆಲಂಗಾಣ, ನಾರ್ಥಿಸ್ಟ್, ಮಧ್ಯ ಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ, ಈ ಹಿಂದೆ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲೂ ಕೂಡಾ ನಾವು ಗೆದ್ದಿದ್ದೇವೆ. ಆಗಲು ಕೂಡಾ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಲ್ಲೇ ಬಂದಿತ್ತು. ಈಗ ನಮ್ಮ ಪ್ರಧಾನಿಯವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಸಿಎಂರವರು ಅಬಕಾರಿ ಸುಂಕ ಕಡಿಮೆ ಮಾಡುವ ಮೂಲಕ ಜನರಿಗೆ ಆಗುತ್ತಿರುವ ಹೊರೆಯನ್ನು ಕಡಿಮೆ ಮಾಡಲು‌ ಕ್ರಮ ಕೈಗೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಸುಂಕ ಕಡಿಮೆ ಮಾಡಿಲ್ಲ. ಈ ಕುರಿತು ಡಿಕೆಶಿ ಹಾಗೂ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಈ ಹಿಂದೆ ಹಲವಾರು ಇಲಾಖೆಯನ್ನು ನಿರ್ವಹಣೆ ಮಾಡಿದ್ದಾರೆ. ಒಬ್ಬರು ಪ್ರಬುದ್ದ ರಾಜಕಾರಣಿಯಾಗಿದ್ದಾರೆ. ರಾಹುಲ್ ಗಾಂಧಿಯವರ ಏನು ತಿಳುವಳಿಕೆ ಕಡಿಮೆ ಇದೆ, ಆದರೆ ಅವರ ರೀತಿಯಲ್ಲಿಯೇ ಡಿಕೆಶಿ ಯಾಕೆ ವರ್ತನೆ ಮಾಡುತ್ತಿದ್ದಾರೆ ಎಂಬುವುದು ಅರ್ಥವಾಗುತ್ತಿಲ್ಲ. ಡಿಕೆಶಿಯವರು ತಿಳುವಳಿಕೆ ಹೊಂದಿದ್ದ ರಾಜಕಾರಣಿಯಾಗಿದ್ದು, ಸ್ವಲ್ಪ ನೋಡಿಕೊಂಡು ಮಾತಾಡಬೇಕು ಎಂದರು.‌

*ಕಾಂಗ್ರೆಸ್‌ನವರು ತುಷ್ಟಿಕರಣದ ರಾಜಕಾರಣ ಮಾಡುತ್ತಾ ಬಂದಿದ್ದಾರೆ.*

ಕಾಂಗ್ರೆಸನವರು ಈ ಹಿಂದಿನಿಂದಲೂ ತುಷ್ಟಿಕರಣ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದಾರೆ. ಈಗ ಮುಸ್ಲಿಂ ಓಟ್‌ಗಳನ್ನು ಸೆಳೆಯವುದಕ್ಕಾಗಿ ಮತ್ತೆ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ. ಅವರ ರೀತಿ ನಾವು ಯಾವತ್ತೂ ತುಷ್ಟಿಕರಣ ರಾಜಕಾರಣ ಮಾಡಿಲ್ಲ. ನಾವು ಯಾವಾಗಲೂ ಸರ್ವರಿಗೆ ಸಮ ಬಾಳು, ಸರ್ವರಿಗೆ ಸಮಪಾಲು ಎನ್ನುವ ಪಾಲಿಸಿಯಲ್ಲಿ ನಂಬಿಕೆ ಇಟ್ಟವರಾಗಿದ್ದೇವೆ. ಅದೇ ಮಾದರಿಯಲ್ಲಿ ನಾವು ಆಡಳಿತ ನಡೆಸುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.

*ಗುಂಡ್ಲುಪೇಟೆ ಚುನಾವಣೆ ನಡೆದ ಸಂದರ್ಭದಲ್ಲಿ ಸಿದ್ದಾರಾಮಯ್ಯ ಅಲ್ಲಿಯೇ ಟೆಂಟ್ ಹೂಡಿದರು.*

ಒಂದು ರಾಜ್ಯದಲ್ಲಿ ಬೈ ಎಲೆಕ್ಷನ್ ಬಂದಾಗ, ಅಲ್ಲಿನ ಆಡಳಿರೂಢ ಪಕ್ಷದ ಮಂತ್ರಿಗಳು‌ ಹಾಗೂ ಮುಖ್ಯಮಂತ್ರಿಗಳು ಹೋಗಿ‌ ಚುನಾವಣೆ ಮಾಡುವುದು ಸಹಜ ಪ್ರಕ್ರಿಯೆ ಆಗಿದೆ. ಅದೇ ರೀತಿ‌ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರು ಹೋಗಿ ಚುನಾವಣೆ ಮಾಡಿದ್ದಾರೆ. ಆದರೆ ಇಲ್ಲಿ ಎರಡು ಕ್ಷೇತ್ರದಲ್ಲಿ‌ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿಲ್ಲ, ಒಂದು ಅವರು ಗೆದ್ದಿದ್ದಾರೆ. ಇನ್ನೊಂದರಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವು ಸಾಧಿಸಿದ್ದಾರೆ. ಆದರೂ ಕೂಡಾ ಎರಡು ಕ್ಷೇತ್ರದ ಬೈ ಎಲೆಕ್ಷನಲ್ಲಿ 53% ಮತಗಳು ಬಿಜೆಪಿ ಪಕ್ಷಕ್ಕೆ ಮತದಾರ ನೀಡಿದ್ದಾನೆ. ನಮ್ಮದೂ ರೂಟೌಟ್ ಆಗಿಲ್ಲ. ಸೋಲು ಅಂದರೆ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದಕ್ಕೂ ಮಾನ್ಯತೆ ಸಿಗಲಿಲ್ಲ ನೋಡಿ ಅದೂ ರೂಟೌಟ್ ಆಗುತ್ತದೆ. ಸಿಂದಗಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 30 ಸಾವಿರಕ್ಕೂ ಅಧಿಕ ಓಟ್‌ನಿಂದ ಸೋತಿದ್ದಾರೆ. ಸಿಂದಗಿಯಲ್ಲಿ ಸಿದ್ದರಾಮಯ್ಯನವರು ಎರಡು ದಿನ ಟೆಂಟ್ ಹೂಡಿ ಪ್ರಚಾರ ಮಾಡಿದ್ದರು. ಒಂದು ಕ್ಷೇತ್ರದಲ್ಲಿ ಗೆದ್ದ ತಕ್ಷ ದೊಡ್ಡ ಗೆಲ್ಲುವು ಎಂದು ಬಿಗುವುದು ಸರಿಯಲ್ಲ ಎಂದು ಕೀಡಿಕಾರಿದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]