Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಕಾಂಗ್ರೆಸ್ ಪಕ್ಷದ ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ : ಪ್ರಹ್ಲಾದ್ ಜೋಶಿ ಕಿಡಿ

ಕಾಂಗ್ರೆಸ್ ಪಕ್ಷದ ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ : ಪ್ರಹ್ಲಾದ್ ಜೋಶಿ ಕಿಡಿ

Spread the love

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ. ಒಂದು ದೇಶವಾಗಿ 100 ಕೋಟಿ ವ್ಯಾಕ್ಸಿನ್ ಗುರಿ ಮುಟ್ಟಿದ್ದು ದೊಡ್ಡ ಸಾಧನೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು,
9 ತಿಂಗಳ ಅವಧಿಯಲ್ಲಿ ನೂರು ಕೋಟಿ‌ ಜನರಿಗೆ ನಾವು ವ್ಯಾಕ್ಸಿನ್ ಕೊಟ್ಟಿದ್ದು ಜಗತ್ತೇ ಕೊಂಡಾಡಿದೆ. ಬಿಲ್ ಗೆಟ್ಸ್ ಸಹಿತ ಈ ಬಗ್ಗೆ ಟ್ವಿಟ್‌ ಮಾಡಿದ್ದಾರೆ. ಇಂಥ ನಾಯಕರು ಇರುವದು ನಮ್ಮ ದೇಶದ ದೌರ್ಭಾಗ್ಯ. ಇಡಿ ಜಗತ್ತಿನಲ್ಲಿ 700 ಕೋಟಿ ವ್ಯಾಕ್ಸಿನ್ ಆಗಿದೆ
ಅದರಲ್ಲಿ 100ಕೋಟಿ ಭಾರತ ಆಗಿದೆ. ಸಿದ್ಧರಾಮಯ್ಯನವರು ಹಾಗೂ ಅವರ ಮುಖಂಡರು ರಾಹುಲ್ ಗಾಂಧಿ ತರಹ ನೀವು ಆಡಬೇಡಿ. ರಾಹುಲ್ ಗಾಂಧಿಗೆ ಅರ್ಥ ಆಗಲ್ಲ, ನೀವು ಯಾಕೆ ಹೀಗೆ ಮಾತಾಡ್ತಿರಿ ಎಂದು ಲೇವಡಿ ಮಾಡಿದರು.

ಮೋದಿ ಅವರಿಗೆ ಈ ಕ್ರೆಡಿಟ್ ಕೊಡಬೇಕು ಅಂತಾ ನಾವು‌ ಬಯಸಿಲ್ಲ,‌‌ಸ್ವತಃ ಮೋದಿನೇ ಬಯಸಿಲ್ಲ. ದೇಶಕ್ಕೆ ಈ ಕ್ರೆಡಿಟ್ ಕೊಡಿ ಎಂದರು.

ನಳಿನ್ ಕುಮಾರ ಕಟೀಲ್ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಹೇಳಿಕೆ‌ಗೆ ಪ್ರತಿಕ್ರಿಯೆ ನೀಡಿದ ಅವರು, ಕಟೀಲ್
ಯಾಕೆ ಈ ರೀತಿ ಮಾತಾಡಿದ್ದಾರೆ ಗೊತ್ತಿಲ್ಲ, ಆದರೆ ಪತ್ರಿಕೆಯಲ್ಲಿ ಬಂದಿದೆ ಎಂದಿದ್ದಾರೆ.
ಆ ಬಗ್ಗೆ ನಾನು ಮಾತನಾಡಲ್ಲ.
ಕೇವಲ ಕಟೀಲ್ ಅವರು ವೈಯಕ್ತಿಕ ನಿಂದನೆ ಮಾಡಿಲ್ಲ
ಸಿದ್ಧರಾಮಯ್ಯನವರು‌ ಮೋದಿ ಅವರನ್ನ ಮಾತನಾಡ್ತಾರೆ.
ಮೋದಿ‌ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. 2014, 18 ಹಾಗೂ 18 ರ ಚುನಾವಣೆಯಲ್ಲಿ ಇವರು ಹೀನಾಯವಾಗಿ ಸೊತಿದ್ದಾರೆ. ಯಾರೇ ಇರಲಿ ಕೆಳ ಮಟ್ಟದ ಟೀಕೆ ಮಾಡಬಾರದು ಇದು ನನ್ನ ವೈಯಕ್ತಿಕ ನಂಬಿಕೆ ಎಂದರು.

ಕಲ್ಲಿದ್ದಲು ಸ್ವಲ್ಪ ಕೊರತೆಯಾಗಿತ್ತು. 2.1
ಮಿಲಿಯನ್ ಪ್ರತಿ ದಿನ ಸಪ್ಲೈ ಮಾಡುತಿದ್ದೆವೆ. ನಾಲ್ಕು ದಿನಗಳ ಸ್ಟಾರ್ ಇದೆ ಎಂದರು.

ಉಪಚುನಾವಣೆಯಲ್ಲಿ ಎರಡೂ ಕಡೆ ನಾವು ಖಂಡಿತ ಗೆಲ್ತೆವೆ. ನಾನು ಹಾನಗಲ್ ಹೋಗಿ ಬಂದಿದ್ದೆನೆ.
ಸಿಂದಗಿ ಹೋಗಿಲ್ಲ.
ಅಲ್ಲಿಯ ಕಾರ್ಯಕರ್ತರ ಜೊತೆ ಇಂಚಾರ್ಜ ಇದ್ದವರ ಜೊತೆ ಸಂಪರ್ಕದಲ್ಲಿ ಇದ್ದೇನೆ. ಪೆಟ್ರೋಲ್ ಡೀಸೆಲ್ ದರ ಚುನಾವಣೆ ಮೇಲೆ ಎಫೆಕ್ಟ್ ಬಿರೋಲ್ಲ. ಆಗಲೂ ನಮಗೆ‌ ಜನ ಓಟು ಹಾಕಿದ್ದಾರೆ, ‌ಆಸ್ಸಾಂನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಗೆದ್ದಿದ್ದೆವೆ.
ಯಾರು ವಿಶ್ಚಾಸಾರ್ಹರು ಎಂದು ಜನರಿಗೆ ಗೊತ್ತಿದೆ ಎಂದರು.

ಬಾಂಗ್ಲಾ‌ದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಪ್ರತಿಕ್ರಿಯೆ ನೀಡಿದ ಅವರು,
ಅಲ್ಲಿನ ಸರ್ಕಾರ ಜೊತೆ ನಮ್ಮ‌ಸರ್ಕಾರ‌‌ ಸಂಪರ್ಕದಲ್ಲಿದೆ.
ಅಲ್ಲಿಯ ಸರ್ಕಾರ ಕೂಡಾ ಕ್ರಮ ಕೈಗೊಳ್ಳುತಿದೆ.ಭಾರತ ಸರ್ಕಾರ ಅಲ್ಲಿಯ ಹಿಂದೂಗಳ ಹಿತ ಕಾಪಾಡಲು ಬದ್ಧವಾಗಿದೆ ಎಂದರು.

ಉಪಚುನಾಣೆಯಲ್ಲಿ ಹಣ‌ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,
ಇದು ಸುಳ್ಳು ಆರೋಪ.
ಕಾಂಗ್ರೆಸ್ ನವರು ಸತ್ಯ ಹರಿಶ್ಚಂದ್ರರಾ. ಕಾಂಗ್ರೆಸ್ ನವರು ಇಷ್ಟೇಲ್ಲಾ ಟೆಂಟ್ ಹಾಕಿದ್ದಾರೆ. ಅವರು ಹಣ ಖರ್ಚೇ ಮಾಡ್ತಿಲ್ವಾ.
ಅಗತ್ಯವಿರುವ ದುಡ್ಡು ಅವರು ಖರ್ಚು ಮಾಡುತಿದ್ದಾರೆ , ನಾವು ಮಾಡ್ತಿದೇವೆ ಎಂದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]