ಹುಬ್ಬಳ್ಳಿ : ಬ್ರಿಟಿಷ್ ರ ವಿರುದ್ಧ ಹೋರಾಡಿದ ನಾಡಿನ ಧೀಮಂತ, ಶ್ರೇಷ್ಠ ಪ್ರಥಮ ಮಹಿಳೆಯಾದ ರಾಣಿ ಕಿತ್ತೂರ ಚೆನ್ನಮ್ಮಳ ತ್ಯಾಗ, ಬಲಿದಾನ ಎಲ್ಲ ಜನತೆ ಸ್ಮರಿಸುವಂತ ದಿನವಾಗಿದೆ. ಬೆಳಗಾವಿಯಿಂದ ಬೆಂಗಳೂರು
ವರೆಗೆ ಚೆನ್ನಮ್ಮಳ ಜ್ಯೋತಿ ಬೆಳಗಿಸಿದ್ದು ನನ್ನ ಸೌಭಾಗ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಶನಿವಾರ ಕಿತ್ತೂರ ರಾಣಿ ಚೆನ್ನಮ್ಮಳ ಜಯಂತಿ ಅಂಗವಾಗಿ ಇಲ್ಲಿಯ ಚೆನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು.
ಬ್ರಿಟಿಷ್ ರ ವಿರುದ್ಧ ರಣಕಹಳೆ ಓದಿದ ರಾಣಿ ಚೆನ್ನಮ್ಮಳ ನಗರದಲ್ಲಿ ಮೂರ್ತಿ ಮಾಡಬೇಕಾದರೆ ಅದು ದೊಡ್ಡ ಹೋರಾಟವಾಗಿತು. ನಮ್ಮ ತಂದೆಯವರು ಉಸ್ತುವಾರಿ ಸಚಿವರಿದ್ದಾಗ ಎರಡು ವರ್ಷದ ಸುದೀರ್ಘ ಹೋರಾಟದ ಫಲವಾಗಿ ಈ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದರು.
ಈಗ ಕಿತ್ತೂರ ರಾಣಿ ಚೆನ್ನಮ್ಮ ಉತ್ಸವ ಮಾಡವ ಮಹತ್ತರ ಕಾರ್ಯ ನನ್ನ ಪಾಲಿಗೆ ಬಂದಿದೆ. 2011ರಲ್ಲಿ ನಾನು ಉಸ್ತುವಾರಿ ಸಚಿವನಿದ್ದಾಗ ಕಿತ್ತೂರ ಪ್ರಾಧಿಕಾರ ಮಾಡಿ ಅವತ್ತು ಎಂಟು ಕೋಟಿ ರೂ. ಬಿಡುಗಡೆಗೊಳಿಸಿ ಆ ಕೆಲಸ ಪ್ರಾರಂಭಿಸಲಾಗಿತ್ತು. ಈ ವರ್ಷ 50 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ಕೊಟ್ಟಿದೆ ಹಣವನ್ನು ಸಹ ಬಿಡುಗಡೆ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಸಂಗೋಳಿ ರಾಯಣ್ಣನ ಎಲ್ಲ ಸೂತ್ರಗಳನ್ನು ಬಿಜೆಪಿ ಸರ್ಕಾರ ಈಡೇರಿಸುತ್ತೆ ಎಂದು ಹೇಳಿದರು.
Hubli News Latest Kannada News