ಹುಬ್ಬಳ್ಳಿ : ಕೋವಿಡ್ ಬಹಳಷ್ಟು ಪಾಠವನ್ನ ಕಲಿಸಿದೆ. ನಮ್ಮ ದೇಶದಲ್ಲಿ ವೈರಲ್ ನ್ನ ಬಹಳ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.
ಮೆಂಟಲಿ ಪ್ರಿಪೇರ್ ಆದಾಗ ಮಾತ್ರ ಇವೆಲ್ಲವನ್ನ ಮೆಟ್ಟಿ ಹಾಕಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಕೊರೊನಾ ಮಹಾಮಾರಿಗೆ ದೇಶದ ಜನಾ ತತ್ತರಿಸಿ ಹೋಗಿದ್ದರು, ಕೊರೊನಾವನ್ನು ತೊಲಗಿಸಲು ಸರ್ಕಾರ ಕೊರೊನಾ ಲಸಿಕೆಯನ್ನು ಇಡೀ ದೇಶಾದ್ಯಂತ ಹಾಕಲಾಗಿತ್ತು, ಕೇವಲ ಒಬ್ಬತ್ತಿ ತಿಂಗಳಲ್ಲಿ ಸುಮಾರು 100 ಕೋಟಿ ಲಸಿಕೆಯನ್ನು ಹಾಕಲಾಗಿದ್ದು, ಈಗ ಭಾರತ ಶತಕೋಟಿ ಡೋಸ್ ಲಸಿಕೆ ವಿತರಿಸಿದ ಮಹತ್ವದ ಮೈಲಿಗಲ್ಲು ಪೂರೈಸಿರುವ ಹಿನ್ನೆಲೆಯಲ್ಲಿ, ಇಂದು ಭಾರತಾದ್ಯಂತ 100 ಕೋಟಿ ಲಸಿಕಾ ಸಂಭ್ರಮವನ್ನು ಆಚರಿಸುತ್ತಿದ್ದು, ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದೀಪ ಬೆಳಗಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು, ಚಾಲನೆ ನೀಡಿದರು.
ಹಾಗೆಯೇ ಮಗುವನ್ನು ನ್ಯುಮೋನಿಯಾದಿಂದ ರಕ್ಷಿಸಬೇಕೆಂದು ಮಗುವಿಗೆ ಲಸಿಕೆ ಹಾಕಿಸುವುದರ ಮೂಲಕ ಸಂಭ್ರಮಾಚರಣೆ ಮಾಡಿದರು.
ಯಾವುದಾದರೂ ವ್ಯಾಪಕ ರೋಗಕ್ಕೆ ಲಸಿಕರಾಣವೇ ಮದ್ದು ಅನ್ನೋದು 100 ವರ್ಷಗಳ ಹಿಂದೆ ಸಾಬೀತಾಗಿದೆ.
ಹಲವಾರು ಮಾನವನ ಜೀವಗಳು ಹಾನಿಯಾಗಿವೆ.
ಯಾವುದಾದರೂ ಈ ರೀತಿ ಸ್ಪೋಟವಾದಾಗ ಹೀಗಾಗುತ್ತೆ.
ಕೋವಿಡ್ ಬಹಳಷ್ಟು ಪಾಠವನ್ನ ಕಳಿಸಿದೆ. ನಮ್ಮ ದೇಶದಲ್ಲಿ ವೈರಲ್ ನ್ನ ಬಹಳ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.
ಮೆಂಟಲಿ ಪ್ರಿಪೇರ್ ಆದಾಗ ಮಾತ್ರ ಇವೆಲ್ಲವನ್ನ ಮೆಟ್ಟಿ ನಿಲ್ಲಲು ಸಾದ್ಯ.
ಸರ್ಕಾರ ಕೋವಿಡ್ ನ್ನ ಎದುರಿಸಿದ್ದರಿಂದ ಕೋವಿಡ್ ನಿರ್ವಹಣೆಯಾಗಿದೆ.ಖಾಸಗಿಯವರಿಗಿಂತಲೂ ಸರ್ಕಾರದ ಆಸ್ಪತ್ರೆಗಳು ಬಹಳ ಕೆಲ್ಸ ಮಾಡಿದೆ. ಅವರು ಮಿನಾಮೇಷ ಎಣಿಸುತ್ತಾರೆ, ಆದ್ರೆ ಸರ್ಕಾರಿ ಆಸ್ಪತ್ರೆಗಳು ಬಹಳ ಕೆಲ್ಸ ಮಾಡಿವೆ.
24 ಸಾವಿರ ಬೆಡ್ ಗಳ ನಿರ್ಮಾಣ ಆಗಿದೆ 6 ಸಾವಿರ ಆಕ್ಸಿಜೆನ್ ನಿರ್ಮಾಣ ಆಗಿವೆ.
ಕೋವಿಡ್ ನಿಂದಾಗಿ ತಾಲೂಕು ಕೇಂದ್ರಗಳ ಅಸ್ಪತ್ರೆಗಳು ಅಪ್ಡೇಟ್ ಆಗಿವೆ.
ಕೋವಿಡ್ ಆರಂಭವಾದಗ ಯಾವುದೇ ಸಲಕರಣೆ ಇರಲಿಲ್ಲ
ಪಿಪಿಈ ಕಿಟ್ ಗಳು ಇರಲಿಲ್ಲ, ಚೀನಾದಿಂದ ಅವುಗಳನ್ನ ತರಿಸುತ್ತಿದ್ದೆವು.
ಆದ್ರೆ ಈಗ ನಾವೇ ಎಲ್ಲವನ್ನ ರಫ್ತು ಮಾಡುವಷ್ಟು ನಾವು ಮುಂದಾಗಿದ್ದೇವೆ.
ಪ್ರಧಾನಿ ಮಾತನಾಡುವ ಬದಲು ಮಾಡಿ ತೋರಿಸಿದ್ದಾರೆ.
ಎಲ್ಲ ಸರ್ಕಾರಿ ಆಸ್ಪತ್ರೆ ಸೇರಿ ಖಾಸಗಿ ಅಸ್ಪತ್ರೆಗಳಿಗೂ ಧನ್ಯವಾದ ಹೇಳಿದ ಸಿಎಂ ಇದೇ ವೇಳೆ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೀಶ ಪಾಟೀಲ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.