ಹುಬ್ಬಳ್ಳಿ: ಚಿನ್ನ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಓರ್ವನನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.
ಇಲ್ಲಿನ ಕೇಶ್ವಾಪುರದ ಮಧುರಾ ಎಸ್ಟೇಟ್ ನಿವಾಸಿ ಚೇತನ ದೇವೆಂದ್ರಪ್ಪ ಜನ್ನು ಬಂಧಿತ ವ್ಯಕ್ತಿ. ಈತ ರವಿವಾರ ರಾತ್ರಿ 38.50 ಲಕ್ಷ ಮೌಲ್ಯದ 804.1 ಗ್ರಾಂ ಚಿನ್ನವನ್ನು ಬೆಲ್ಟ್ ನಲ್ಲಿ ಸಾಗಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಸಿಸಿಬಿ ಪೋಲಿಸರು ಇಲ್ಲಿನ ಗಿರಣಿಚಾಳದ ಏಳು ಮಕ್ಕಳ ತಾಯಿಯ ಗುಡಿಯ ಹಿಂಭಾಗದಲ್ಲಿ ಬಂಧಿಸಿದ್ದಾರೆ. ಚಿನ್ನವನ್ನು ವಶಕ್ಕೆ ಪಡೆದುಕೊಂಡ ಸಿಸಿಬಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.