ಹುಬ್ಬಳ್ಳಿ: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ), ಕರ್ನಾಟಕದ ಭಕ್ತರು ಹಾಗು ಪ್ರವಾಸಿಗರಿಗಾಗಿ ‘ ಮಾ ವೈಷ್ಣೋ ದೇವಿ ದರ್ಶನ ಯಾತ್ರೆ’ ಎಂಬ ವಿಶೇಷ ರೈಲು ಪ್ರವಾಸವನ್ನು ಆಯೋಜಿಸಿದೆ ಎಂದು ಐಆರ್ ಸಿಡಿಸಿಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ರಮೇಶ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಏರ್ಪಡಿಸಿ ಮಾತನಾಡಿದ ಅವರು, 11 ರಾತ್ರಿ, 12 ಹಗಲುಗಳ ವಿಶೇಷ ಪ್ರವಾಸಿ ರೈಲು ಅಕ್ಟೋಬರ್ 18 ರಂದು ಬೆಂಗಳೂರು ವೈಟ್ ಫೀಲ್ಡ್ , ತುಮಕೂರು, ಅರಸಿಕೆರೆ, ದಾವಣಗೆರೆ, ಹುಬ್ಬಳ್ಳಿ, ಗದಗ ಮತ್ತು ವಿಜಯಪುರ ರೈಲು ನಿಲ್ದಾಣದಿಂದ ಹೊರಡಲಿದೆ. ದೆಹಲಿ-ಮಥುರಾ- ಹರಿಹ್ವಾರ-ಕಟ್ರಾ-ಜೈಪುರ ದೇವಸ್ಥಾನ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಪ್ರವಾಸಕ್ಕೆ ತಗಲುವ ಒಟ್ಟು ವೆಚ್ಚ ರೂ 11.340
ಸ್ಲೀಪರ್ ಕ್ಲಾಸ್ ರೈಲು ಪ್ರಯಾಣ, ರಾತ್ರಿ ಉಳಿಯಲು ಅಥವಾ ಫ್ರೆಶ್ ಆಗಲು ಧರ್ಮಶಾಲಾ/ಹಾಲ್/ ಡಾರ್ಮಿಟೋರೀಸ್ ವ್ಯವಸ್ಥೆಯು ಬಹು ಹಂಚಿಕೆ ಆಧಾರದ ಮೇಲೆ ನೀಡಲಾಗುವುದು. ಬೆಳಗಿನ ಟೀ/ ಕಾಫಿ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯೂ ಇದೆ. ಪ್ರವಾಸಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ಎಲ್‌ಟಿಸಿ ಸೌಲಭ್ಯ ಕೂಡ ಪಡೆಯಬಹುದು ಎಂದು ಅವರು ಹೇಳಿದರು.
ಇನ್ನು ಪ್ರವಾಸಕ್ಕಾಗಿ ಐಆರ್‌ಸಿಟಿಸಿ ಕೌಂಟರ್‌ಗಳಲ್ಲಿ ಮತ್ತು www.irctctourism.com ವೆಬ್‌ಸೈಟ್ ಮೂಲಕ ಬುಕಿಂಗ್ ಪ್ರಾರಂಭಿಸಲಾಗಿದೆ. ವಿವರಗಳಿಗಾಗಿ ಸಂಪರ್ಕಿಸಿ;
ಬೆಂಗಳೂರು ಪ್ರಾದೇಶಿಕ ಕೇಂದ್ರ: 8595931291, 8595931290
ಬೆಂಗಳೂರು ರೈಲು ನಿಲ್ದಾಣ: 8595931292
ಮೈಸೂರು ರೈಲು ನಿಲ್ದಾಣ: 8595931294
ಹುಬ್ಬಳ್ಳಿ ರೈಲು ನಿಲ್ದಾಣ: 8595931293 ಗೆ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಟ್ಯೂರಿಸಮ್ ಅಸಿಸ್ಟೆಂಟ್ ಮಂಜುನಾಥ ನಾಯಕ, ಸೋಮೇಶ್ವರ, ಬಿಜಿತ್ ಇದ್ದರು.