ಹುಬ್ಬಳ್ಳಿ: ಹಾದಿ ಎಜ್ಯೂಕೇಶನ್ ಮತ್ತು ವೆಲಫೇರ ಟ್ರಸ್ಟ್ ಹಿದಾಯತುಸ್ಸುನ್ನಿಯಾ ಅನಾಥಾಶ್ರಮ ಹಾಗೂ ನಿರ್ಗತಿಕ ಮಕ್ಕಳ ಆಶ್ರಯ ಮನೆ ವತಿಯಿಂದ ಗೋಕುಲ ರಸ್ತೆಯ ಐದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಇಲ್ಲಿನ ಹಳೇಹುಬ್ಬಳ್ಳಿ ಇಸ್ಲಾಂಪುರ ರಲ್ಲಿನ ಟ್ರಸ್ಟ್ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು. ಇನ್ನೂ ಫೌಂಡೇಶನ್ ಅಧ್ಯಕ್ಷ ಎಮ್.ಜಿ.ಮನ್ನಾನಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಹಾದಿ ಅನಾಥಾಶ್ರಮ ಆ್ಯಂಡ್ ವೆಲ್ ಫೇರ್ ಫೌಂಡೇಶನ್ ಕಳೆದ 10 ವರ್ಷಗಳಿಂದ ಅನಾಥ ಮಕ್ಕಳ ರಕ್ಷಣೆ ಸೇರಿದಂತೆ ಹತ್ತು ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಅದರಂತೆ ಇಂದು ಬಡಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಕಣ್ಣಿನ ತಪಾಸಣೆ ಶಿಬಿರ ನಡೆಸಲಾಯಿತು. ಇದರಲ್ಲಿ 500 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಇವರಲ್ಲಿ ಅತಿ ಕಡುಬಡವ ಜನರಿಗೆ ಫೌಂಡೇಶನ್ ವತಿಯಿಂದಲೇ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದರು.
ಕಣ್ಣೀನ ತಪಾಸಣೆ ಶಿಬಿರದಲ್ಲಿ 500 ಕ್ಕೂ ಹೆಚ್ಚು ಜನರು ಭಾಗಿಯಾಗಿ ತಪಾಸಣೆ ಕೈಗೊಂಡರು. ಈ ಸಂದರ್ಭದಲ್ಲಿ ಸಲೀಂ ಸುಂಡಕೆ, ಆಸೀಫ್ ಉಸ್ತಾದ್, ಅಜಾರ್, ಶಾಜಿದ್, ಶಾಕೀರ್ ಅಹ್ಮದ್ ಸರವರಿ, ಸಯ್ಯದ್ ಮದನ್, ಫಾರುಕ್ ಗುಲಬರ್ಗಾ, ಮುಕ್ತುಂ ಮೀಯಾನವರ, ಸೇರಿದಂತೆ ಮುಂತಾದವರು ಇದ್ದರು.