ಧಾರವಾಡ : ಧಾರವಾಡ ತಾಲೂಕಿನ ಕವಲಗೇರಿ ಗ್ರಾಮ ಹದ್ದೆಯ ಜಮೀನುಗಳಲ್ಲಿರುವ ಕಬ್ಬಿನ ಗದ್ದೆಗಳು ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿರತೆ ಪತ್ತೆ ಹಚ್ಚುವ ಮತ್ತು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದವರಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಎರಡು ಮೂರು ದಿನಗಳ ಹಿಂದೆ ಚಿರತೆ ಕಂಡು ಬಂದಿದ್ದ ಪ್ರದೇಶದಲ್ಲಿ ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಬಿಂಗ್ ಕಾರ್ಯ ಕೈಗೊಂಡಿದ್ದಾರೆ.
ಅದರ ಪಕ್ಕದ ಜಮೀನುಗಳಲ್ಲಿರುವ ಕಬ್ಬಿನಗದ್ದೆಗಳಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಈ ಹೆಜ್ಜೆ ಗುರುತುಗಳು ಇವತ್ತಿನವೂ ಹೌದೊ ..ಅಲ್ಲೊ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮೊನ್ನೆದಿನದ ಕಾರ್ಯಾಚರಣೆಯಲ್ಲಿ ಬೆರೆಕಡೆ ಹೊಗಿದ್ದ ಚಿರತೆ ಮತ್ತೆ ಮರಳಿ ಇದೇ ಪ್ರದೇಶಕ್ಕೆ ಮರಳಿ ಬಂದಿರುವ ಕುರಿತು ಪರಿಶೀಲಿಸಲಾಗುತ್ತಿದೆ.
ಚಿರತೆ ಹೊರಗಡೆ ಹೊದರು ಸಹ ಸುತ್ತಲಿನ ಪ್ರದೇಶದ ಎಲ್ಲ ಕಡೆಗೆ ಗದ್ದಲ,ಜನದಟ್ಟಣೆ, ಬಯಲು ಪ್ರದೇಶ ಇರುವದರಿಂದ ಬಹುಶಃ, ಅದಕ್ಕೆ ಯಾವ ಕಡೆ ಹೋಗಬೇಕು ಎಂಬುದು ತಿಳಿಯದೆ; ಈ ಭಾಗದಲ್ಲಿ ಕಬ್ಬು ಹೆಚ್ಚು ಇರುವದರಿಂದ ಕಬ್ಬಿನ ಗದ್ದೆಗಳಲ್ಲಿ ಸುರಕ್ಷತೆ ಬಯಸಿ ಬರುತ್ತಿರುವ ಸಾಧ್ಯತೆ ಇದೆ.
ಕೂಬಿಂಗ್ ಮೂಲಕ
ಚಿರತೆ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನಿಖರವಾಗಿ ಚಿರತೆ ಇರುವ ಪ್ರದೇಶ ಗುರುತಿಸಿ,
ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ತೀವ್ರ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹುಬ್ಬಳ್ಳಿ ರಾಜನಗರ, ನೃಪತುಂಗ ಬೆಟ್ಟದ ಪ್ರದೇಶದಲ್ಲಿಯೂ ಚಿರತೆ ಕಾರ್ಯಾಚರಣೆ ಮುಂದುವರಿಸಲಾಗಿದೆ.ಆದರೆ ಕಳೆದ ಕೆಲ ದಿನಗಳಿಂದ ಅಲ್ಲಿ ಇರುವ ಬಗ್ಗೆ ಮತ್ತೇ ಯಾವೂದೆ ಕುರುಹುಗಳು ಪತ್ತೆ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ 40 ಕ್ಕೂ ಹೆಚ್ಚು ಸಿಬ್ಬಂದಿ, ಅರವಳಿಕೆ ತಜ್ಞರು ಪ್ರತಿ ದಿನದಂತೆ ಕವಲಗೇರಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳು ಹಾಗೂ ಚಿರತೆ ಹೊರ ಬರಬಹುದಾದ ನಾಲ್ಕೈದು ಸ್ಥಳಗಳಲ್ಲಿ ತಂಡಗಳಾಗಿ ಇಂದೂ ಸಹ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ಡಿಎಪ್ಓ ಯಶಪಾಲ ಕ್ಷೀರಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.