ಫ್ಲೈ ಓವರ್ ಸಭೆಯಲ್ಲಿ ಶೇಮ್ ಶೇಮ್ ಎಂದು ಕೂಗಿದ ಜನರು
ಹುಬ್ಬಳ್ಳಿ : ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಹಲವು ಆಕ್ಷೇಪಣೆಗಳ ಬಂದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು,ಉದ್ಯಮಿಗಳು,ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಾಯಿತು.
ನಗರದ ಕನ್ನಡ ಭವನದಲ್ಲಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರಪಾಟೀಲ್ ,ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಅಧಿಕಾಗಳಿಗೆ ಮಾಹಿತಿ ಕೊರತೆಯಿಂದಾಗಿ ಗೊಂದಲ ಉಂಟಾಗಿತ್ತು. ಸಭೆಯಲ್ಲಿ ವಾಣಿಜ್ಯ ಸಂಸ್ಥೆಯ ಸದಸ್ಯರು ಫ್ಲೈ ಓವರ್ ನಿಂದ ಆಗುವ ಸಮಸ್ಯೆಗಳನ್ನು ಮನವರಿಕೆ ಮಾಡಿದರು. ಆಗ ಅಧಿಕಾರಿಗಳು ಸಮರ್ಪಕವಾದ ಮಾಹಿತಿ ನೀಡಲಾಗಲಿಲ್ಲ.”ಶೇಮ್ ಶೇಮ್ ” ಎಂದು ಸಾರ್ವಜನಿಕರು ಸಭೆಯಲ್ಲಿದ್ದವರು ಕೂಗಿದರು.
ಬಳಿಕ ಎಲ್ಲರನ್ನ ಸಮಾಧಾನ ಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಎಲ್ಲರೂ ನಗರ ಅಭಿವೃದ್ಧಿಗಾಗಿ ಸಭೆ ಸೇರಿದ್ದೇವೆ. ಶೇಮ್ ಶೇಮ್ ಎನ್ನೋದು ಸರಿಯಲ್ಲ.
ಇದು ಅಸೆಂಬ್ಲಿಯಲ್ಲ.
ಎಲ್ಲರ ಸಲಹೆ ಸೂಚನೆ ಪಡೆಯುತ್ತೇವೆ.
ಎಲ್ಲರೂ ಸಲಹೆ ನೀಡಿ,ಅಭಿವೃದಿಗಾಗಿ ಸಲಹೆ ಪಡೆಯೋಣವ ಎಂದು ಜೋಶಿ ಮನವಿ ಮಾಡಿದರು.