ಹುಬ್ಬಳ್ಳಿ : ರಸ್ತೆಗಳಿಗೆ ಅಡ್ಡಿಯಾಗಿರುವ ಧಾರ್ಮಿಕ ಕೇಂದ್ರಗಳ ತೆರವುಗೊಳಿಸಲು ಪರಿಹಾರ ವಿತರಿಸಲಾಗಿದ್ದರೂ ಇನ್ನೂ ಕೆಲವಡೆ ತೆರವು ಕಾರ್ಯಾಚರಣೆ ನಡೆದಿಲ್ಲ. ಈ ಬಗ್ಗೆ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ತೆರವು ವಿಚಾರ ಬಹಳಷ್ಟು ಸೂಕ್ಷ್ಮವಾಗಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪುರಾತನ ದೇವಾಲಯಗಳನ್ನು ತೆರವುಗೊಳಿಸುವಾಗ ಅಚಾರ್ತು ನಡೆದಿದೆ ಎಂದರು.
ರಸ್ತೆಗಳಿಗೆ ಅಡ್ಡಿಯಾಗಿರುವ ಧಾರ್ಮಿಕ ಕೇಂದ್ರಗಳನ್ನು ತೆರಗೊಳಿಸಬಹುದು. ಈ ಕುರಿತಂತೆ ಸುಪ್ರೀಂ ನೀಡಿದ ತೀರ್ಪಿನಲ್ಲಿಯೂ ಕೆಲವು ಕಂಡಿಷನ್‌ಗಳಿವೆ. ನೂರಾರು ವರ್ಷಗಳ ಹಿಂದಿನ ದೇವಾಲಯ ಕೆಡುವ ಮುನ್ನ ಸಂಬಂಧಪಟ್ಟವರ ಜತೆ ಚರ್ಚಿಸಬೇಕಿತ್ತು ಎಂದ ಶೆಟ್ಟರ್, ತರಾತುರಿಯಲ್ಲಿ ದೇವಾಲಯಗಳನ್ನು ಒಡೆಯಬಾರದೆಂದರು.
ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ಸಂಘಟನೆ, ಬೆಳವಣಿಗೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಶೆಟ್ಟರ್ ಉತ್ತರಿಸಿದರು.