ಸದ್ಯ ಈಗ ಮೂರು ಮಾಹಾನಗರ ಪಾಲಿಕೆಗಳಲ್ಲಿ ಚುನಾವಣೆ ಮುಗಿದು ಫಲಿತಾಂಶ ಬಂದಿದೆ. ಹುಬ್ಬಳ್ಳಿ ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿಯಲ್ಲಿ ನಾವೇ ಈ ಬಾರಿ ಅಧಿಕಾರವನ್ನು ಹಿಡಿಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪಕ್ಷದಿಂದ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಎಲ್ಲವನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ ಎಂದರು.
*ಕರಾವಳಿಭಾಗದಲ್ಲಿ ಸ್ಯಾಟಲೈಟ್ ಪೋನ್ ಬಗ್ಗೆ ನಿಗಾ ಇಟ್ಟೆದ್ದೇವೆ*
ಕರಾವಳಿ ಭಾಗದಲ್ಲಿ ಸ್ಯಾಟ್ ಲೈಟ್ ಪೋನ್ ಬಳಕೆ ಕುರಿತಂತೆ ಸರ್ಕಾರ ಈಗ ನಿಗಾವಹಿಸಿದೆ. ಈ ಕುರಿತು ಈಗಾಗಲೇ ನಮ್ಮ ಗೃಹ ಸಚಿವರು ಪ್ರತಿಕ್ರೆಯೆಯನ್ನು ನೀಡಿದ್ದಾರೆ. ಕರವಾಳಿ ಭಾಗದಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಕುರಿತು ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.
2019-20 ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ನಿಂದ 29,826 ಕೋಟಿ ಹಣ ಬಳಕೆಯಾಗದಿರುವ ವಿಚಾರ ಕುರಿತು ಪ್ರತಿಕ್ರೆಯೆ ನೀಡಿದ ಅವರು, ಕಳೆದ ಬಾರಿಯೂ ಈ ರೀತಿ ವರದಿ ಬಂದಿತ್ತು. ಹಣಕಾಸು ಇಲಾಖೆ ಸಿಎಜಿಗೆ ಎಲ್ಲಾ ವರದಿ ನೀಡಿತ್ತು. ಅದೇ ರೀತಿ ಈ ಬಾರಿಯೂ ಬಂದಿದೆ, ಅದನ್ನು ಮರಳಿ ಹಂಚಿಕೆ ಮಾಡುವಂತೆ ಮುಖ್ಯ ಕಾರ್ಯದರ್ಶಿವರಿಗೆ ಈಗಾಗಲೇ ಸೂಚನೆ ನಿಡಿದ್ದೇನೆ. ಇನ್ನೂ ಪೆಟ್ರೋಲ್ ಬೆಲೆ ವಿಚಾರದಲ್ಲಿ ಸೆಸ್ ಕಡಿಮೆ ಮಾಡೋ ಬಗ್ಗೆ ನಾಳೆ ಸದನದಲ್ಲಿ ಉತ್ತರ ನೀಡಲಿದ್ದೇನೆ ಎಂದು ತಿಳಿಸಿದರು.