Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ತೀರ್ಥ,ಪ್ರಸಾದದ ಬದಲಿಗೆ ವ್ಯಾಕ್ಸಿನ್: ವಾಣಿಜ್ಯನಗರಿಯಲ್ಲೊಂದು ಜಾಗೃತಿ

ತೀರ್ಥ,ಪ್ರಸಾದದ ಬದಲಿಗೆ ವ್ಯಾಕ್ಸಿನ್: ವಾಣಿಜ್ಯನಗರಿಯಲ್ಲೊಂದು ಜಾಗೃತಿ

Spread the love

ಹುಬ್ಬಳ್ಳಿ: ಇಷ್ಟು ದಿನಗಳ ಕಾಲ ಗಣೇಶೋತ್ಸವದಲ್ಲಿ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಆದರೆ ಕಿಲ್ಲರ್ ಕೊರೋನಾ ವೈರಸ್ ಬಂದಿದ್ದೆ ಬಂದಿದ್ದು, ಆಚರಣೆಗಳೆಲ್ಲವೂ ಅದಲು ಬದಲು ಆಗಿವೆ.

ಹೌದು.. ವಾಣಿಜ್ಯನಗರಿ ಹುಬ್ಬಳ್ಳಿಯ ದೇಶಪಾಂಡೆ ನಗರ ಶ್ರೀಕೃಷ್ಣ ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಭಕ್ತರಿಗೆ ಹಾಗೂ ಗಣೇಶ ಮಂಡಳಿಯವರಿಗೆ ಲಸಿಕೆ ವಿತರಣೆ ಮಾಡಲಾಯಿತು. ಮೂರ್ತಿ ವಿಸರ್ಜನೆಗೆ ಹೋಗುವವರಿಗೆ ಹಾಗೂ ದರ್ಶನಕ್ಕೆ ಬರುವವರಿಗೆ ಕಿಲ್ಲರ್ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಲು ವ್ಯಾಕ್ಸಿನ್ ಅಭಿಯಾನ ಕೈಗೊಳ್ಳಲಾಯಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ನೇತೃತ್ವದಲ್ಲಿ ಈ ಒಂದು ಲಸಿಕಾ ಅಭಿಯಾನ ಮಾಡುವ ಮೂಲಕ ಲಸಿಕಾ ವಿತರಣೆ ಮೂಲಕ ಗಣೇಶೋತ್ಸವ ಆಚರಣೆ ಮಾಡಲಾಯಿತು.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]