ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಹೋಗಿದ್ದು, ಅಭಿವೃದ್ಧಿ ಕಾಮಗಾರಿಗಳ ಫೈಲ್ ಮೂವ್ ಮಾಡಿಸುವುದಕ್ಕೆ ಅಷ್ಟೇ. ನಮ್ಮಲ್ಲಿ ಯಾವುದೇ ವೈ ಮನಸ್ಸು ಇಲ್ಲ. ಅಲ್ಲದೆ ಕೇಂದ್ರ ಫೈನಾನ್ಸ್ ಸಚಿವರ ಜೊತೆಗೆ ಮಾತನಾಡಿರುವ ಪೋಟೋಗಳು ಕೂಡಾ ಬಂದಿವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಿಎಂ ದೆಹಲಿ ಟೂರ ಕುರಿತು ಸ್ಪಷ್ಟನೆ ನೀಡಿದರು.
ಧಾರವಾಡಕ್ಕೆ ಭೇಟಿ ನೀಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಾಯಕರಾದ ಯಡಿಯೂರಪ್ಪನವರು ಕೂಡಾ ದೆಹಲಿಗೆ ಹೋಗಿ ಬಂದು ಬಹಳ ದಿನಗಳಾಗಿವೆ. ಪದೇ ಪದೇ ಸಿಎಂ ಅವರು ದೆಹಲಿಗೆ ಹೋಗಿಲ್ಲ. ಎಲ್ಲವು ಚೆನ್ನಾಗಿ ನಡೆದಿದೆ. ಅಲ್ಲದೆ ರಾಜ್ಯಕ್ಕೆ ನಮ್ಮ ಕೇಂದ್ರ ಗೃಹ ಸಚಿವರು ಬಂದ ಸಂದರ್ಭದಲ್ಲಿಯು ಉತ್ತಮ, ಸರಳ ಮುಖ್ಯಮಂತ್ರಿ ಎಂದು ಹೇಳಿ ಹೋಗಿದ್ದಾರೆ ಎಂದರು.
*ಯಾರು ಎಲ್ಲಿಯೂ ಹೋಗಬಾರದು ಎಂದು ಹೇಳುವುದಕ್ಕೆ ಬರುವುದಿಲ್ಲ.*
ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿ, ಸಾರ್ವಜನಿಕರಿಗೆ ನೀವು ಎಲ್ಲಿಯು ಹೋಗಬಾರದು ಅಂತಾ ನಿರ್ಬಂಧ ಹಾಕುವುದಕ್ಕೆ ಬರುವುದಿಲ್ಲ. ಸಾರ್ವಜನಿಕರು ಕೂಡಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಕ್ರಮಿನಲ್ ಚಟುವಟಿಕೆಗಳು ಅಥವಾ ಭಯದ ವಾತಾವರಣ ಇದ್ದ ಪ್ರದೇಶಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೆ ಅಲ್ಲಿ ಪೊಲೀಸರು ಗಸ್ತು ಹೆಚ್ಚಿಸುತ್ತಾರೆ. ಇಂತಹ ಸ್ಥಳದಲ್ಲಿ ಅಪಾಯಕರಿಯಾಗಿದೆ ಅಂತಾ ಮಾಹಿತಿ ನೀಡಿದ್ದರೆ ಅಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗ ಎಲ್ಲರೂ ಪೊಲೀಸ ಠಾಣೆಗೆ ಹೋಗಿ ಮಾಹಿತಿ ನೀಡಬೇಕು ಅನ್ನುವ ಹಾಗೆ ಇಲ್ಲ ನಮ್ಮ 112 ಸಹಾಯವಾಣಿ ಕರೆ ಮಾಡಿದ್ರೆ ಸಾಕು ಅಲ್ಲಿಗೆ ಪೊಲೀಸರು ಹೋಗುತ್ತಾರೆ. ಇನ್ನುಳಿದಂತೆ ಸಿವಿಲ್ ಪ್ರಕರಣಗಳ ಕುರಿತು ಎಲ್ಲಿಯಾದರೂ ಪೊಲೀಸರು ನಿರ್ಲಕ್ಷ್ಯ ಇದ್ದರೆ ಎಚ್ಚರಿಕರ ನೀಡುತ್ತೇನೆ ಹೇಳಿದರು.
*ಡ್ರಗ್ಸ್ ಪ್ರಕರಣ ಕುರಿತು ನ್ಯಾಯಾಲಯಕ್ಕೆ ಚಾರ್ಜ್ಶಿಟ್ ಸಲ್ಲಿಕೆಯಾಗಿದೆ ಮತ್ತೇನಾದ್ರೂ ಇದಲ್ಲಿ ತನಿಖೆಯಾಗುತ್ತದೆ .*
ಡ್ರಗ್ಸ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಕೋರ್ಟ್ಗೆ ತನಿಖಾಧಿಕಾರಿಗಳು ಚಾರ್ಜಶಿಟ್ ಸಲ್ಲಿಕೆ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಏನಾದರೂ ಇದಲ್ಲಿ ತನಿಖೆ ನಡೆಯುತ್ತದೆ. ಯಾರ್ಯಾರೋ ಡ್ರಗ್ಸ್ ಒ್ರಕರಣ ಕುರಿತು ಪ್ರಸ್ತಾಪ ಮಾಡುತ್ತಿದ್ದಾರೆ ಅದರ ಕುರಿತು ನಾನು ಹೇಗ್ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದರು.